Saturday, June 10, 2023

Latest Posts

ತಾಂಜೇನಿಯಾದಲ್ಲಿ ಜನಸಂದಣಿ ಮೇಲೆ ಹರಿದ ಕಾರು: 14 ಮಂದಿ ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಂಜೇನಿಯಾದಲ್ಲಿ ಜನಸಂದಣಿ ಮೇಲೆ ಕಾರು ಹರಿದಿದ್ದು, 14 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದಕ್ಷಿಣ ತಾಂಜೇನಿಯಾದ ಮೆಟ್ಟಾರಾ ಪ್ರದೇಶದ ಲಿಡುಂಬೆ ಗ್ರಾಮದಲ್ಲಿ ಚಾಲಕನೊಬ್ಬ ಜನಸಂದಣಿ ಮೇಲೆ ಕಾರು ಹರಿಸಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 22  ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವೇಗವಾಗಿ ಬರುತ್ತಿದ್ದ ಸ್ಕ್ಯಾನಿಯಾ ಕಾರು ಚಾಲಕ ನಿಯಂತ್ರಣ ತಪ್ಪಿ ಸುತ್ತಮುತ್ತ ಇದ್ದ ಜನರಿಗೆ ಜನರ ಮೇಲೆ ಕಾರು ಚಲಾಯಿಸಿದ್ದಾನೆ. ತಾಂಜೇನಿಯಾದ ಅಧ್ಯಕ್ಷ ಸಾಮಿಯಾ ಸುಲುಹು ಹಸನ್ ಅವರು ಅಪಘಾತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!