Sunday, June 4, 2023

Latest Posts

ದಕ್ಷಿಣ ಆಫ್ರಿಕಾ vs ಭಾರತ: ಎರಡನೇ ದಿನದಾಟಕ್ಕೆ ಮಳೆ ಅಡ್ಡಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ನಿನ್ನೆ ಆರಂಭವಾಗಿದೆ. ಜೋಹನ್ಸ್‌ಬರ್ಗ್‌ನ ವಂಡರರ‍್ಸ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು,ನಿನ್ನೆ ಟೀಂ ಇಂಡಿಯಾ ನಿರೀಕ್ಷೆಯ ಬ್ಯಾಟಿಂಗ್ ಮಾಡಿಲ್ಲ.
ಇಂಜುರಿಯಿಂದಾಗಿ ಕ್ಯಾಪ್ಟನ್ ಕೋಹ್ಲಿ ಪಂದ್ಯದಿಂದ ಹೊರಗಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಹೊಣೆ ಹೊತ್ತಿದ್ದಾರೆ.

ನಿನ್ನೆ ಭಾರತ 202ರನ್‌ಗೆ ಸರ್ವಪತನ ಕಂಡಿದ್ದು, ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ.
ಇಂದು ಎರಡನೇ ದಿನದ ಆಟಕ್ಕೆ ವರುಣ ಅಡ್ಡಿಯಾಗುವ ಸಾಧ್ಯತೆ ಇದೆ. ಜೋಹನ್ಸ್‌ಬರ್ಗ್‌ನಲ್ಲಿ ಗುಡುಗು ಸಮೇತ ಮಳೆಯಾಗುವ ಮುನ್ಸೂಚನೆ ಇದೆ. ನಿನ್ನೆ ಮೋಡ ಕವಿದ ವಾತಾವರಣ ಇತ್ತು. ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಏನಾಗಲಿದೆ ಎಂದು ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!