May 19, 2026
Tuesday, May 19, 2026
spot_img

ಮೊಬೈಲ್‌ ಕೊಡ್ತಿಲ್ಲ ಅಂತ ಬೇಜಾರಲ್ಲಿ ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೊಬೈಲ್‌ ಇಲ್ಲದೆ ಜೀವನ ನಡೆಸೋಕೆ ಆಗೋದಿಲ್ಲ ಎನ್ನುವಷ್ಟು ಅಡಿಕ್ಷನ್‌ ಬೆಳೆಸಿಕೊಂಡಿದ್ದ ಬಾಲಕನೊಬ್ಬ ತಾಯಿ ಮೊಬೈಲ್‌ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹುಬ್ಬಳ್ಳಿಯ ಉದಯನಗರದ ವಾಸಿ 14 ವರ್ಷದ ಸಮರ್ಥ್‌ ಮೃತ ಬಾಲಕ. ಉಚಿತ ಗೇಮ್ಸ್‌ಗಳನ್ನು ಆಡೋದು ಸಮರ್ಥ್‌ಗೆ ಇಷ್ಟದ ಕೆಲಸವಾಗಿತ್ತು. ಅತಿಯಾಗಿ ಗೇಮ್ಸ್‌ಗೆ ಅಡಿಕ್ಟ್‌ ಆಗಿದ್ದ ಸಮರ್ಥ್‌ ಯಾರ ಮಾತನ್ನೂ ಕೇಳುತ್ತಿರಲಿಲ್ಲ.

ಗುರುವಾರ ಸತತವಾಗಿ ಗೇಮ್‌ ಆಡ್ತಿದ್ದ ಮಗನಿಗೆ ಮೊಬೈಲ್‌ ಬೇಡ ಓದಿಕೋ ಎಂದು ಹೇಳಿದ್ದಾರೆ. ಇದರಿಂದ ಬೇಸರಿಸಿಕೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ರೂಮಿಗೆ ಹೋಗಿ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !