Tuesday, March 28, 2023

Latest Posts

ಗುತ್ತಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಳ: ರಾಜ್ಯ ಸರ್ಕಾರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ (contractual employees) ವೇತನ ಶೇಕಡಾ 15ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುತ್ತಿರುವ 25 ಸಾವಿರಕ್ಕೂ ಹೆಚ್ಚು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರಿಗೆ ಶೀಘ್ರದಲ್ಲೇ ಶೇ. 15 ರಷ್ಟು ವೇತನ ಹೆಚ್ಚಳಪಿ.ಎನ್‌.ಶ್ರೀನಿವಾಸಾಚಾರಿ ಸಮಿತಿ ಶಿಫಾರಸಿನನ್ವಯ ಏಪ್ರಿಲ್ 1ರಿಂದ ಜಾರಿಯಾಗುವಂತೆ ಸರ್ಕಾರ ಆದೇಶಿಸಿದೆ.

ನೌಕರರಿಗೆ ಕನಿಷ್ಠ ವೇತನ ನೀಡುವ ಪ್ರಕ್ರಿಯೆಯನ್ನೂ ಸರ್ಕಾರ ನಡೆಸಿದೆ. ಎಚ್​​ಎಚ್​ಎಂ ಯೋಜನೆ ಕ್ರೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ 50 ಅನುಪಾತದ ಅನುದಾನದಲ್ಲಿ ನಡೆಯುತ್ತಿರುವ ಯೋಜನೆಯಾಗಿದೆ. ಇಂತಹ ಯೋಜನೆಗಳು ಅಗತ್ಯ ಇರುವವರೆಗೆ ನಡೆಯುತ್ತದೆ. ಹಾಗಾಗಿ ಈ ನೌಕರರನ್ನು ಕಾಯಂ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!