Tuesday, March 28, 2023

Latest Posts

ಮಮತಾ ಬ್ಯಾನರ್ಜಿ ವಿರುದ್ಧ ಹೇಳಿಕೆ: ಕಾಂಗ್ರೆಸ್ ವಕ್ತಾರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಟಿಮ ಬಂಗಾಳದಲ್ಲಿ ಮತ್ತೆ ರಾಜಕೀಯ ಹೈಡ್ರಾಮ ಶುರುವಾಗಿದ್ದು, ಉಪಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ವಕ್ತಾರ ಸೇರಿದಂತೆ ಹಲವು ನಾಯಕರು ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಮುಂದಿಟ್ಟು ಟೀಕಿಸಿದ್ದರು. ಜನತೆ ಕಾಂಗ್ರೆಸ್ ಪರವಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಇದರಿಂದ ಸಿಟ್ಟಿಗೆದ್ದ ಮಮತಾ ಬ್ಯಾನರ್ಜಿ ಸರಕಾರ ಕಾಂಗ್ರೆಸ್ ವಕ್ತಾರ ಕೌಸ್ತವ್ ಬಗ್ಚಿಯನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಉಪಚುನಾವಣೆ ಫಲಿತಾಂಶ (By poll Result)ದಲ್ಲಿ ಸಗರ್ದಿಗಿ ಕ್ಷೇತ್ರದಲ್ಲಿ ಟಿಎಂಸಿ ಮಣಿಸಿದ ಕಾಂಗ್ರೆಸ್(Congress) ಜಯಭೇರಿ ಬಾರಿಸಿದೆ. ಇದು ಟಿಎಂಸಿ (TMC) ಕಾರ್ಯಕರ್ತರು ಹಾಗೂ ಸ್ವತಃ ಮಮತಾ ಬ್ಯಾನರ್ಜಿ ಗೆ ಭಾರೀ ಹಿನ್ನಡೆಯಾಗಿತ್ತು.
ಈ ವೇಳೆ ಜನರು ಗೂಂಡಾ ರಾಜಕೀಯ ಹಾಗೂ ಹಣದ ಆಮಿಷದ ರಾಜಕೀಯವನ್ನು ತರಿಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿತ್ತು. ಇದರ ಜೊತೆ ಕೆಲ ವೈಯುಕ್ತಿಕ ಟೀಕೆಗಳನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.

ಕೌಸ್ತವ್ ಬಗ್ಚಿ ಹೇಳಿಕೆ ನೀಡಿದ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರು ದೂರು ನೀಡಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳ (Wetst bengal) ಪೊಲೀಸರು ಕೌಸ್ತವ್ ಬಗ್ಚಿಯನ್ನು ಬಂಧಿಸಿದ್ದಾರೆ.

ಇಂದು ಬೆಳಗ್ಗೆ 3.30ಕ್ಕೆ 24 ಪರಗಣ ಜಿಲ್ಲೆಯಲ್ಲಿರುವ ಭಗ್ಚಿ ಮನೆಗೆ ದಾಳಿ ಮಾಡಿದ ಪೊಲೀಸರು(Police) ಬಂಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ನಿದ್ದೆಯಿಂದ ಏಳುವ ಮೊದಲೇ ಬಂಧನ ಕಾರ್ಯ ಮುಗಿದಿದೆ.

ಕೌಸ್ತವ್ ಬಗ್ಚಿ ವಿರುದ್ಧ 120(B), 504 ಹಾಗೂ 506 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಕೌಸ್ರವ್ ಬಗ್ಚಿ ಬಂಧವನ್ನು ಕಾಂಗ್ರೆಸ್ ಖಂಡಿಸಿದೆ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆ ತೋರುವ ಮಮತಾ ಬ್ಯಾನರ್ಜಿಗೆ ಮಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!