150 ವರ್ಷ ಹಳೆಯ ಹಿಂದೂ ಕ್ಯಾಲೆಂಡರ್ ಜರ್ಮನಿಯಲ್ಲಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜರ್ಮನಿಯ ಸೆಕೆಂಡ್‌ ಹ್ಯಾಂಡ್ ವಸ್ತುಗಳನ್ನು ಮಾರಾಟ್ಮಾಡುವ ಮಾರುಕಟ್ಟೆಯೊಂದರಲ್ಲಿ (flea market) 150 ವರ್ಷ ಹಳೆಯ ಹಿಂದೂ ಕ್ಯಾಲೆಂಡರ್‌ ಪತ್ತೆಯಾಗಿದೆ. ಜರ್ಮನಿ ಮೂಲದ ವ್ಯಕ್ತಿಯೊಬ್ಬರು ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ ಹಂಚಿಕೊಂಡಿದ್ದು, ಇದು ಏನು ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ಕ್ಷಣದಲ್ಲೇ ಇದು ಭಾರತೀಯರ ಗಮನ ಸೆಳೆದಿದ್ದು, ಅನೇಕ ಭಾರತೀಯರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 185ಕ್ಕೂ ಅಧಿಕ ಜನ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

ಜರ್ಮನಿಯ ಹಂಬ್ರಗ್‌ನ ಸೆಕೆಂಡ್‌ ಹ್ಯಾಂಡ್ ಮಾರುಕಟ್ಟೆಯಲ್ಲಿ ಈ ಕ್ಯಾಲೆಂಡರ್ ಲಭ್ಯವಾಗಿದೆ.  ದೇವನಾಗರಿ ಲಿಪಿಯಲ್ಲಿರುವ ಈ ಪಠ್ಯದ ಅರ್ಥ ಹಾಗೂ ಮೂಲ ಏನು ಎಂದು ಪ್ರಶ್ನಿಸಿದ್ದಾರೆ.  ಅಕ್ಷರಗಳಿಂದ ತುಂಬಿದ ಎರಡು ಹಳೆಯ, ಹಳದಿ ಪುಟಗಳ ಚಿತ್ರಗಳನ್ನು ಅವರು ಪೋಸ್ಟ್‌ ಮಾಡಿದ್ದು, ಹಿಂದಿ ಅಥವಾ ಸಂಸ್ಕೃತದಲ್ಲಿ ಇರುವಂತೆ ಕಾಣಿಸುತ್ತಿದೆ.  ಪೋಸ್ಟ್ ಮಾಡಿದ ವ್ಯಕ್ತಿ ಇದರಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಲು ನೆಟ್ಟಿಗರ ಸಲಹೆ ಕೇಳಿದ್ದಾರೆ.

ಅನೇಕ ಭಾರತೀಯರು ಕೂಡಲೇ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಇದು ಹಿಂದೂ ಪಂಚಾಂಗವಾಗಿದೆ ಎಂದಿದ್ದಾರೆ. ಜ್ಯೋತಿಷ್ಯ, ಹಾಗೂ ಶುಭಕಾರ್ಯಗಳನ್ನು ನಡೆಸುವುದಕ್ಕೆ ಕೆಟ್ಟ ಗಳಿಗೆ ಒಳ್ಳೆಯ ಗಳಿಗೆಗಳನ್ನು ತಿಳಿಸುವ ಹಿಂದೂ ಪಂಚಾಗವಾಗಿದೆ. ಈ ಪುಟಗಳು ಮೂಲತಃ ಭಾರತದ ವಾರಣಾಸಿ ಮೂಲದ್ದು ಎಂದು ಜನಗುರುತಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!