ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ಮಿಸ್ ಆಗಿರುವ ಬಿಜೆಪಿ ಶಾಸಕ ನೆಹರು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಹನಿ ನೀರಾವರಿಗೆ ಸಂಬಂಧಿಸಿದಂತೆ 1500 ಕೋಟಿ ರೂಪಾಯಿ ಬೊಮ್ಮಾಯಿ ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ, ಇದನ್ನು ಬಯಲಿಗೆ ಎಳೆಯುತ್ತೇನೆ ಎಂದು ಆರೋಪ ಮಾಡಿದ್ದಾರೆ.
ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ದಾಖಲೆ ಇಲ್ಲದೆ ಯಾವುದು ಹಗರಣ ಅಲ್ಲ, ಸುಮ್ಮನೆ ಬಾಯಿಗೆ ಬಂದಷ್ಟು ಕೋಟಿ ಹೇಳಿ ಹಗರಣ ಆಗಿದೆ ಎಂದರೆ? ದಾಖಲೆ ಸಮೇತ ಆರೋಪಿಸಿ. ಸತ್ಯಾಸತ್ಯತೆ ಹೊರಬರಲಿ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ.