ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಬೆಳೆ, ಅಡಿಕೆ ತೋಟಕ್ಕೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ

ಹೊಸದಿಗಂತ ವರದಿ,ಮುಂಡಗೋಡ:

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗದ್ದೆಯಲ್ಲಿ ಬೆಂಕಿ ಬಿದ್ದು ಕಬ್ಬಿನ ಬೆಳೆ, ಅಡಿಕೆ ತೋಟ, ಬಾಳೆ ತೋಟ ಸೇರಿದಂತೆ ನಾಲ್ಕು ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿದ್ದು ಸುಮಾರು ೨ ಲಕ್ಷ ರೂಪಾಯಿ ಮೌಲ್ಯದ ರೈತರ ಬೆಳೆ ಹಾನಿ ಸಂಭವಿಸಿದ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಜರುಗಿದೆ.
ನಂದಿಕಟ್ಟಾ ಗ್ರಾಮದ ಮಂಜುನಾಥ ಕವಟೆ ಹಾಗೂ ಮನೋಹರ ಕವಟೆ ಎಂಬ ರೈತರಿಗೆ ಸೇರಿದ ಗದ್ದೆಗಳಲ್ಲಿ ಅಗ್ನಿ ಅವಘಡ ಸಂಬವಿಸಿದೆ. ಈ ಎರಡು ರೈತರ ಗದ್ದೆ ಹಾಗೂ ತೋಟಗಳ ಮೇಲ್ಬಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿದ್ದರಿಂದ ಬೆಂಕಿ ಉದ್ಭವಿಸಿ ಗದ್ದೆ ಹಾಗೂ ತೋಟಕ್ಕೆ ಬೆಂಕಿ ಬಿದ್ದಿದೆ.
ಮಂಜುನಾಧ ಎಂಬ ರೈತನ ಸರ್ವೇ ನಂಬರ್ ೬೭/೨ ರಲ್ಲಿನ ಗದ್ದೆಯಲ್ಲಿಯ ಸುಮಾರು ೨ ಎಕರೆ ೧೮ ಗುಂಟೆ ಹೊಲದಲ್ಲಿ ಬೆಳೆದಿದ್ದ ಕಬ್ಬು ಹಾಗೂ ೪ ಮಾವಿನ ಮರಗಳು ಬೆಂಕಿಯಿಂದ ಹಾನಿಯಾದರೆ. ಮನೋಹರ ಎಂಬ ರೈತನ ಸರ್ವೇ ನಂಬರ್ ೬೭/೦೧ ರಲ್ಲಿಯ ಸುಮಾರು ೨ ಎಕರೆ ತೋಟದಲ್ಲಿ ಬೆಳೆದಿದ್ದ ೧೫೦ ಅಡಿಕೆ ಮರಗಳು ಹಾಗೂ ೫೦ ಬಾಳೆ ಗಿಡಗಳಿಗೆ ಬೆಂಕಿಗಿ ಸುಟ್ಟು ಹಾನಿಯಾಗಿದೆ. ಇದರಿಂದ ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಬೆಳೆ ಹಾನಿ ಸಂಭವಿಸಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹೆಚ್ಚು ಅನಾಹುತ ಆಗುವುದನ್ನು ತಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ನಾರಾಯಣ ತಳೇಕರ್, ಸಿಬ್ಬಂದಿ ರಾದ ಬಸವರಾಜ್ ಇಂಚಲ, ಗುರುಪ್ರಸಾದ ಕಮಲಾಕರ್ , ಸೋಮಶೇಖರ್ , ಚಮನಸಾಬ ನದಾಫ್, ದಾದಾಪಿರ ಕೊರಗ್ಗೆರ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!