Tuesday, August 16, 2022

Latest Posts

ಲಡಾಖ್‌ನಲ್ಲಿ ಮತ್ತೆ ಭಾರತ-ಚೀನಾ ಮಿಲಿಟರಿ ಸಭೆ: ಹಿಂದೆ ಸರಿಯಲಿದೆಯೇ ಡ್ರ್ಯಾಗನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಡಾಖ್‌ನಲ್ಲಿ ಭಾರತ- ಚೀನಾ 16ನೇ ಸುತ್ತಿನ ಮಿಲಿಟರಿ ಮಾತುಕತೆ ಆರಂಭವಾಗಿದ್ದು, ಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ.
ಡೆಪ್ಸಾಂಗ್, ಡೆಮ್ ಚೋಕನ್ ಸಮಸ್ಯೆ ಪರಿಹರಿಸುವ ಜೊತೆಗೆ ಸೈನ್ಯ ಹಿಂತೆಗೆದುಕೊಳ್ಳುವಂತೆ ಭಾರತ ಚೀನಾದ ಮೇಲೆ ಇನ್ನಷ್ಟು ಒತ್ತಡ ಹೇರಲಿದೆ.

14ನೇ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್ ಗುಪ್ತಾ, ಚೀನಾದ ಮೇಜರ್ ಜನರಲ್ ಯಾಂಗ್ ಲಿನ್ ಮಧ್ಯೆ ನಡೆಯುತ್ತಿರುವ ಈ ಸಭೆಯಲ್ಲಿ ಪಿಪಿ15, ಡೆಪ್ಸಾಂಗ್ ಮತ್ತು ಡೆಮ್ಚೋಕ್ ಹೀಗೆ ಮೂರು ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆಯಿದೆ.

ದ್ವಿಪಕ್ಷೀಯ ಸಂಬಂಧ ಸುಧಾರಿಸಬೇಕಾದರೆ ಗಡಿಯಲ್ಲಿ ಶಾಂತಿ ಅಗತ್ಯ ಎಂದು ಭಾರತ ಪ್ರತಿಪಾದಿಸಿದೆ. ಗಡಿ ವಿವಾದ ಪರಿಹಾರ ಕ್ರಮದ ಕುರಿತಾಗಿ ಭಾರತವು ಸೇನೆ ಹಿಂಪಡೆಯುವಂತೆ ಚೀನಾಗೆ ಈ ಹಿಂದೆ ಹಲವು ಬಾರಿ ಸೂಚಿಸಿದ್ದರೂ ಚೀನಾ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss