ದೆಹಲಿಯಲ್ಲಿ ಡೆಂಗ್ಯೂ ಹಾವಳಿ: ದಿನದಿಂದ ದಿನಕ್ಕೆ ಪ್ರಕರಣಗಳ ಏರಿಕೆ, ಆತಂಕದಲ್ಲಿ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಮುನಾ ನದಿಯ ಜಲಾನಯನ ಪ್ರದೇಶಗಳ ಜೊತೆಗೆ ದೆಹಲಿಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯು ನಗರವನ್ನು ಭಯಭೀತಗೊಳಿಸಿದೆ. ಮಳೆ ನಿಂತು ಕೊಂಚ ಉಸಿರಾಡುತ್ತಿರುವಾಗಲೇ ದೆಹಲಿ ನಿವಾಸಿಗಳಿಗೆ ಮತ್ತೊಂದು ಭೀತಿ ಎದುರಾಗಿದೆ. ಯಮುನಾನಾ ನದಿಗೆ ಭಾರೀ ಪ್ರವಾಹದ ನೀರು ಬಂದು ಸೇರುತ್ತಿದ್ದು, ದೆಹಲಿ ನಗರದಲ್ಲಿ ಸಾಂಕ್ರಾಮಿಕ ರೋಗಗಳು ವಿಪರೀತವಾಗಿವೆ.

ಪ್ರವಾಹ ಭೀತಿಯ ನಡುವೆಯೂ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ನೈರ್ಮಲ್ಯ ಸಮಸ್ಯೆ ತಲೆದೋರುತ್ತಿದ್ದಂತೆ ಡೆಂಗ್ಯೂ ಜ್ವರಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈವರೆಗೆ 187 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಜುಲೈ 22 ರವರೆಗೆ ದೆಹಲಿಯಲ್ಲಿ 187 ಡೆಂಗ್ಯೂ ಪ್ರಕರಣಗಳು ಮತ್ತು 61 ಮಲೇರಿಯಾ ಪ್ರಕರಣಗಳು ದಾಖಲಾಗಿವೆ.
ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ದೆಹಲಿ ಮೇಯರ್ ಶೆಲ್ಲಿ ಒಬೆರಾಯ್  ಹೇಳಿದ್ದಾರೆ.

ಪರಿಸ್ಥಿತಿ ಹೀಗಿದ್ದರೆ ದೆಹಲಿಯಲ್ಲಿ ಮುನ್ಸಿಪಲ್ ಕಾರ್ಮಿಕರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜುಲೈ 31ರಿಂದ ಮುಷ್ಕರ ನಡೆಸುವುದಾಗಿ ಸೂಚಿಸಿದ್ದಾರೆ. ಪ್ರವಾಹ, ಸಾಂಕ್ರಾಮಿಕ ರೋಗಗಳು ಪ್ರಚಲಿತದಲ್ಲಿರುವಂತಹ ಸಂದರ್ಭಗಳಲ್ಲಿ ಮುಷ್ಕರ ಮಾಡುವುದು ಸರಿಯಲ್ಲ ಎಂದು ಮೇಯರ್ ಸಲಹೆ ನೀಡಿದರು. ಕಾರ್ಮಿಕರ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!