HEALTH| ತೂಕ ಇಳಿಕೆಗೆ ಸಹಕಾರಿ ಈ ಸರಳ ಪಾನೀಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಹದ ತೂಕ ಇಳಿಸಿಕೊಳ್ಳಲು ಅನೇಕ ಮಂದಿ ವಿವಿಧ ರೀತಿಯ ಪಾನೀಯ ಕುಡಿಯಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ ಡಯಟ್‌ ಅನ್ನು ಅನುಸರಿಸುತ್ತಾರೆ. ಅದರೆ ಮುಖ್ಯವಾಗಿ ದೇಹದ ಬೊಜ್ಜು ಕರಗಬೇಕು. ಹಾಗಾಗಿ ದೇಹದ ತೂಕ ಇಳಿಸಿಕೊಳ್ಳಲು ಈ ಸರಳ ಪಾನೀಯ ಟ್ರೈ ಮಾಡಿ.

ಬೇಕಾಗುವ ಸಾಮಾಗ್ರಿಗಳು:

* ಜೇನು
* ಚಕ್ಕೆ ಪುಡಿ
* ನೀರು

ಮಾಡುವ ವಿಧಾನ:

* ಒಂದು ಕಪ್ ನೀರನ್ನು ಬಿಸಿ ಮಾಡಿ.
* ನೀರು ಬಿಸಿಯಾಗುತ್ತಿದ್ದಂತೆ ಅದಕ್ಕೆ ಚಕ್ಕೆ ಹಾಕಿ ಪಾತ್ರೆಯ ಬಾಯಿ ಮುಚ್ಚಿ, ಉರಿಯಿಂದ ಕೆಳಗಿಳಿಸಿ.
* ನೀರು ಬಿಸಿ ಆರಿ, ಕುಡಿಯುವ ಹದಕ್ಕೆ ಬಂದಾಗ ಜೇನನ್ನು ಸೇರಿಸಿ.
* ಅರ್ಧ ಲೋಟ ಚಕ್ಕೆ ಪಾನೀಯವನ್ನು ಮಲಗುವ ಮುಂಚೆ ಕುಡಿಯಿರಿ. ಮತ್ತು ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಇದನ್ನು ಪ್ರತಿನಿತ್ಯ ಮಾಡುವುದರಿಂದ ದೇಹದ ಬೊಜ್ಜು ಕರಗುತ್ತದಲ್ಲದೇ ದೇಹದ ತೂಕ ಕೂಡ ಇಳಿಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!