ಕಳ್ಳಭಟ್ಟಿ ಸೇವಿಸಿ ಇಬ್ಬರ ಸಾವು: 12ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾನುವಾರ ರಾತ್ರಿ ಬಿಹಾರದ ಸಿವಾನ್‌ನ ಲಕಾರಿ ನಬಿಗಂಜ್‌ನಲ್ಲಿ ನಕಲಿ ಮದ್ಯ ಸೇವಿಸಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಸಿವಾನ್‌ನಲ್ಲಿರುವ ಉಪವಿಭಾಗದ ಸಾರ್ವಜನಿಕ ಕುಂದುಕೊರತೆ ಅಧಿಕಾರಿ ಅಭಿಷೇಕ್ ಚಂದನ್ ಈ ಕುರಿರು ಸ್ಪಷ್ಟನೆ ನೀಡಿದ್ದು, ಮೃತರಲ್ಲಿ ಒಬ್ಬರು ನಕಲಿ ಮದ್ಯ ಸೇವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೊಬ್ಬರು ಸಿವಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿನ ಕಾರಣ ಸ್ಪಷ್ಟಪಡಿಸಲಾಗುವುದು ಎಂದು ಅಭಿಷೇಕ್ ಚಂದನ್ ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಮೃತರು ಸಿವಾನ್‌ನ ನಬಿಗಂಜ್‌ನ ಬಾಲಾ ಗ್ರಾಮದ ಜನಕ್ ಬೀನ್ ಅಲಿಯಾಸ್ ಜನಕ್ ಪ್ರಸಾದ್ ಮತ್ತು ನರೇಶ್ ಬೀನ್ ಎಂದು ಗುರುತಿಸಲಾಗಿದೆ. ನಕಲಿ ಮದ್ಯ ಸೇವಿಸಿ ಸಾವು-ನೋವು ಪ್ರಕರಣಗಳು ಬೆಳಕಿಗೆ ಬಂದಾಗಿನಿಂದಲೂ ಜಿಲ್ಲಾಡಳಿತ ಗ್ರಾಮದಲ್ಲಿ ಶಿಬಿರ ನಡೆಸಲು ಆರಂಭಿಸಿದೆ.

ಸುಮಾರು ಹತ್ತಾರು ಜನರು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮದ ಜಿಲ್ಲಾ ಕೌನ್ಸಿಲರ್ ರಮೇಶ್ ಕುಮಾರ್ ತಿಳಿಸಿದರು. ಈ ನಕಲಿ ಮದ್ಯ ಸೇವನೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದರು.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!