ಇಸ್ರೇಲ್‌ನಲ್ಲಿ ಉಗ್ರನ ಅಟ್ಟಹಾಸ; ಭೀಕರ ಗುಂಡಿನ ದಾಳಿಗೆ ಇಬ್ಬರು ಬಲಿ, 8 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಸ್ರೇಲ್‌ ನ ಟೆಲ್ ಅವೀವ್‌ ನಗರದಲ್ಲಿ ಗುರುವಾರ ತಡರಾತ್ರಿ ಭೀಕರ ಉಗ್ರ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟು, 8ಕ್ಕಿಂತಲೂ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಟೆಲ್ ಅವೀವ್ ನಗರದ ಡಿಜೆನ್‌ಗಾಫ್ ಸ್ಟ್ರೀಟ್‌ನ ಜನನಿಬಿಡ ಸ್ಥಳಗಳಲ್ಲಿ ಒರ್ವ ಉಗ್ರನಿಂದ ಗುಂಡಿನ ದಾಳಿ ನಡೆದಿದೆ. ಹಲವಾರು ಕೆಫೆಗಳು ಮತ್ತು ಬಾರ್‌ಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಉಗ್ರ ಪಿಸ್ತೂಲ್‌ ನಿಂದ ಜನರ ಮೇಲೆ ಏಕಾಏಕಿ ಗುಂಡಿನ ಮಳೆಗೆರೆದಿದ್ದಾನೆ. ಕಪ್ಪು ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದ ಶಂಕಿತ ಉಗ್ರನ ಚಿತ್ರವನ್ನು ಇಸ್ರೇಲ್ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆತನ ಪತ್ತೆಗಾಗಿ ನಗರದೆಲ್ಲೆಡೆ ತೀವ್ರ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ನಗರದ ಪೊಲೀಸ್ ವಕ್ತಾರ ಎಲಿ ಲೆವಿ ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿದ್ದ 10 ಮಂದಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ಕುರಿತಾಗಿ ಇಸ್ತ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಅಘಾತ ವ್ಯಕ್ತಪಡಿಸಿದ್ದಾರೆ. ಉಗ್ರನ ಪತ್ರೆಗೆ ಭದ್ರತಾಪಡೆಗಳು ಶೋಧ ಆರಂಭಿಸಿವೆ. ಇಂತಹ ವಿಧ್ವಂಸಕ ಕೃತ್ಯ ನಡೆಸಿದ್ದರು ಯಾರೇ ಆಗಿದ್ದರೂ ಸುಮ್ಮನೆ ಬಿಡುವುದಿಲ್ಲ. ಉಗ್ರನಿಗೆ ನೆರವು ನೀಡಿದವರೂ ಇದಕ್ಕೆ ತಕ್ಕ ಪ್ರತಿಫಲ ತೆರಬೇಕಾಗುತ್ತದೆ ಎಂದು ಕಟು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!