ಪಾಕ್‌ ಜೈಲು ಸೇರಿದ್ದ 20 ಭಾರತೀಯ ಮೀನುಗಾರರು ತಾಯ್ನಾಡಿಗೆ ವಾಪಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೀನುಗಾರಿಕೆ ವೇಳೆ ಪಾಕಿಸ್ತಾನದ ಜಲಪ್ರದೇಶದೊಳಗೆ ಪ್ರವೇಶಿಸಿದ ಆರೋಪದ ಮೇಲೆ ಕಳೆದ 4 ವರ್ಷಗಳಿಂದ ಪಾಕಿಸ್ತಾನದಲ್ಲಿ  ಬಂಧಿಸಲ್ಪಟ್ಟಿದ್ದ 20 ಮೀನುಗಾರರು ಭಾರತಕ್ಕೆ ವಾಪಾಸ್‌ ಆಗಿದ್ದಾರೆ.
2017ರಲ್ಲಿ ಪಾಕಿಸ್ತಾನದ ಗಡಿಗೆ ಹೋಗಿ ಬಂಧನಕೊಳಗಾಗಿದ್ದವರು ಸೋಮವಾರ ತಡರಾತ್ರಿ ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ವಾಪಾಸ್‌ ಬಂದಿದ್ದಾರೆ ಎಂದು ಶಿಷ್ಟಾಚಾರ ಅಧಿಕಾರಿ ಅರುಣ್ಪಾಲ್‌ ಸಿಂಗ್‌ ತಿಳಿಸಿದ್ದಾರೆ.
ಬಂಧಿತ ಮೀನುಗಾರರನ್ನು ಕರಾಚಿಯ ಲಾಂಧಿ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಈಗ ಪಾಕಿಸ್ತಾನ 20 ಮೀನುಗಾರರನ್ನು ವಾಪಾಸ್‌ ಕಳುಹಿಸಿದೆ ಎಂದರು.
ಬಿಡುಗಡೆಯಾದ 20 ಮಂದಿ ಮೀನುಗಾರರ ಪೈಕಿ ಐವರು ಉತ್ತರ ಪ್ರದೇಶದವರು ಮತ್ತು 15 ಮಂದಿ ಗುಜರಾತ್‌ ನ ಗಿರ್ ಸೋಮನಾಥ್ ಜಿಲ್ಲೆಯವರು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.
ತವರು ರಾಷ್ಟ್ರಕ್ಕೆ ಮರಳಿದ ಮೀನುಗಾರರು ಭಾರತ ಸರ್ಕಾರ ಹಾಗೂ ಭಾರತೀಯ ಸೇನೆಗೆ ಧನ್ಯವಾದ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!