ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬರೀ ಕಾಫಿ, ತಿಂಡಿ, ಬಿಸ್ಕೆಟ್‌ಗೆ ೨೦೦ ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದು, ಇದೀಗ ಸಿದ್ದರಾಮಯ್ಯ ಇದರ ವಿರುದ್ಧ ದನಿಯೆತ್ತಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಕಚೇರಿಯಲ್ಲಿ ಕಾಫಿ,ಟೀ,ತಿಂಡಿ,ಊಟಕ್ಕೆ 200 ಕೋಟಿ ರೂಪಾಯಿ ಖರ್ಚಾಗಿದೆ ಅಂತಿದ್ದಾರೆ. ಈ ಥರ ಸುಳ್ಳು ಯಾಕೆ ಹೇಳ್ತಾರೆ? ಸುಳ್ಳು ಹೇಳ್ಕೋಂಡು ತಿರುಗಾಡುತ್ತಿರೋ ಕೂಗುಮಾರಿಗೆ ಸರಿಯಾದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಿದೆ.
ಮುಖ್ಯಮಂತ್ರಿಗಳೇ ಅವರಿಗೆ ಚಿಕಿತ್ಸೆ ಕೊಡಿಸಿ, ಇದು ನನ್ನ ಮನವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.