2,000 ವರ್ಷಗಳ ಇತಿಹಾಸವಿರುವ ಮಣ್ಣಿನದೀಪ ಗುರುತಿಸಿದ ವಿದ್ಯಾರ್ಥಿಗಳು:ತಜ್ಞರಿಂದ ಮೆಚ್ಚುಗೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪುರಾತತ್ತ್ವಜ್ಞರು ಸಾಮಾನ್ಯವಾಗಿ ಮಣ್ಣಿನ ಪದರಗಳಲ್ಲಿ ಹುದುಗಿರುವ ಅನೇಕ ರಹಸ್ಯಗಳನ್ನು ಮತ್ತು ಇತಿಹಾಸವನ್ನು ಜಗತ್ತಿಗೆ ಬಹಿರಂಗಪಡಿಸುತ್ತಾರೆ. ಅಳಿವಿನಂಚಿನಲ್ಲಿರುವ ಅಪರೂಪದ ಮತ್ತು ವಿಚಿತ್ರ ಜೀವಿ, ವಸ್ತುಗಳ ರಹಸ್ಯ ಬೇಧಿಸಲು ತಜ್ಞರು ಸದಾ ಕಾರ್ಯಾಸಕ್ತರಾಗಿರುತ್ತಾರೆ.

ಆದರೆ, ಇಲ್ಲಿ ಕೆಲವು ಮಕ್ಕಳು ಅಪರೂಪದ ಮತ್ತು ಅದ್ಭುತವಾದ ಪ್ರಾಚೀನ ವಸ್ತುವನ್ನು ಗುರುತಿಸಿ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರರಾದರು. ಇಸ್ರೇಲ್‌ನ ಗಲಿಲಿ ಬಳಿಯ ಕಿಬ್ಬುತ್ಜ್ ಪರೋಡ್‌ನಲ್ಲಿರುವ ಶಾಲೆಯಲ್ಲಿ ನಾಲ್ಕನೇ ತರಗತಿಯ ಮೂವರು ವಿದ್ಯಾರ್ಥಿಗಳು ರಜೆಯ ದಿನದಂದು ಶಾಲೆಯ ಆವರಣದ ಬಳಿ ಆಟವಾಡುವ ವೇಳೆ ಮಣ್ಣಿನ ಮೇಣದಬತ್ತಿ ದೀಪವನ್ನು ಗಮನಿಸಿದ್ದಾರೆ. ಒಂದು ರೀತಿಯ ಕಲ್ಲು ಎಂದು ಭಾವಿಸಿ ಅಗೆದಾಗ ಏನೋ ವಿಚಿತ್ರ ಅನಿಸಿ ತಮ್ಮ ಪೋಷಕರಿಗೆ ತೋರಿಸಿದರು. ಪೋಷಕರಿಗೆ ಇದೊಂದು ಪುರಾತನ ವಸ್ತು ಎಂದೆನಿಸಿ ಇಸ್ರೇಲ್‌ನ ಪುರಾತತ್ವ ಅಧಿಕಾರಿಗಳಿಗೆ ಕೊಟ್ಟಿದ್ದಾರೆ.

ಅದನ್ನು ಪರೀಕ್ಷಿಸಿದ ವಿಜ್ಞಾನಿಗಳು ಇದು 2,000 ವರ್ಷಗಳಷ್ಟು ಹಳೆಯದಾದ ಮಣ್ಣಿನ ಮೇಣದಬತ್ತಿ ಎಂದು ಕಂಡುಕೊಂಡರು. ಈ ವಿಷಯವನ್ನು ಸೋಮವಾರ (ಡಿಸೆಂಬರ್ 19, 2020) ಅಧಿಕೃತವಾಗಿ ಘೋಷಿಸಲಾಯಿತು. ವಿದ್ಯಾರ್ಥಿಗಳಿಗೆ ಪುರಾತತ್ತ್ವ ಶಾಸ್ತ್ರದ ಅಧಿಕಾರಿಗಳು ಸನ್ಮಾನಿಸಿ ಪ್ರಶಂಸಾಪತ್ರಗಳನ್ನು ಹಸ್ತಾಂತರಿಸಿದರು. ಇದೀಗ ಪುರಾತತ್ತ್ವಜ್ಞರು ಮಣ್ಣಿನ ಮೇಣದಬತ್ತಿ ಪತ್ತೆಯಾದ ಪ್ರದೇಶದಲ್ಲಿ ಉತ್ಖನನವನ್ನು ಪ್ರಾರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!