WONDER | ಗ್ವಾಟೆಮಾಲಾದ ಮಳೆಕಾಡುಗಳಲ್ಲಿ 2 ಸಾವಿರ ವರ್ಷದ ಹಿಂದಿನ ನಗರಿ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರದ ಗ್ವಾಟೆಮಾಲಾದ ಮಳೆ ಕಾಡುಗಳಲ್ಲಿ ಎರಡು ಸಾವಿರ ವರ್ಷಗಳ ಹಿಂದಿನ ನಗರಿಯೊಂದು ಪತ್ತೆಯಾಗಿದೆ.

ವೈಮಾನಿಕ ಸಮೀಕ್ಷೆಯಲ್ಲಿ ಸಂಶೋಧಕರಿಗೆ ಪುರಾತನ ಮಾಯಾನ್ ನಗರ ಇರುವಿಕೆ ಕಂಡುಬಂದಿದೆ. ಮೆಕ್ಸಿಗನ್ ಗಡಿ ಸಮೀಪದಲ್ಲಿ ಒಟ್ಟಾರೆ 650 ಚದರ ಮೈಲುಗಳಷ್ಟು ಈ ಪ್ರದೇಶ ವ್ಯಾಪಿಸಿದೆ. ಎರಡು ಸಾವಿರ ವರ್ಷಗಳ ಹಿಂದೆ ಮಾಯಾನ್ ನಗರ ಅಸ್ವಿತ್ವದಲ್ಲಿತ್ತು. ಇದನ್ನು ಮಿರಾಡೋರ್ ಕಲಾಕ್ಮುಲ್ ಕಾರ್ಸ್ಟ್ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ.

ಲೈಟ್ ಡಿಟೆಕ್ಷನ್ ಆಂಡ್ ರೇಂಜಿಂಗ್ (ಲಿಡಾರ್) ವಿಧಾನ ಬಳಸಿ ಅಮೆರಿಕ, ಫ್ರಾನ್ಸ್ ಹಾಗೂ ಗ್ವಾಟೆಮಾಲಾದ ಸಂಶೋಧಕರು ಜಂಟಿಯಾಗಿ ಈ ನಗರಿಯನ್ನು ಪತ್ತೆ ಹಚ್ಚಿದ್ದಾರೆ. ಮಳೆ ಕಾಡುಗಳ ಅಂತರಾಳದಲ್ಲಿ ಏನಿದೆ ಎಂದು ಪತ್ತೆ ಹಚ್ಚಲು ಲಿಡಾರ್ ವಿಧಾನ ಬಳಲಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!