Wednesday, June 7, 2023

Latest Posts

ಚಾಟ್‌ಜಿಪಿಟಿ ಭದ್ರತಾ ಲೋಪ ಕಂಡುಹಿಡಿದ್ರೆ 20 ಸಾವಿರ ಡಾಲರ್‌ ಬಹುಮಾನ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಜಗತ್ತಿನಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಕೃತಕಬುದ್ಧಿಮತ್ತೆ ಚಾಟ್‌ಜಿಪಿಟಿ (ChatGPT) ಯಲ್ಲಿ ಭದ್ರತಾ ಲೋಪಗಳನ್ನು (security breach) ಕಂಡುಹಿಡಿದರೆ ಬರೋಬ್ಬರಿ 20 ಸಾವಿರ ಡಾಲರ್‌ ಬಹುಮಾನ ನೀಡುವುದಾಗಿ ಚಾಟ್‌ಜಿಪಿಟಿ ಡೆವಲಪರ್‌ ಸಂಸ್ಥೆಯಾದ ಮೈಕ್ರೋಸಾಫ್ಟ್ ಒಡೆತನದ OpenAI ಹೇಳಿದೆ.

ಕಳೆದ ತಿಂಗಳಿನಲ್ಲಿ ಚಾಟ್‌ಜಿಪಿಟಿಯಲ್ಲಿ ಭದ್ರತಾ ಲೋಪಗಳು ನಡೆದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ OpenAI ಚಾಟ್‌ಜಿಪಿಟಿ ಮತ್ತು ಇತರ ಉತ್ಪನ್ನಗಳಿಗೆ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಪ್ರಾರಂಭಿಸಿದೆ. ಚಾಟ್‌ಜಿಪಿಟಿ ಭದ್ರತೆಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರಲು ಈ ರೀತಿಯ ಬೌಂಟಿ ಆಫರ್‌ ಗಳನ್ನು ನೀಡಲಾಗಿದೆ. ಸಾಮಾನ್ಯವಾಗಿ ಟೆಕ್‌ ಕಂಪನಿಗಳು ತಮ್ಮ ತಂತ್ರಜ್ಞಾನವನ್ನು ಹ್ಯಾಕರ್‌ಗಳಿಂದ ಅಥವಾ ಸೈಬರ್‌ ಅಟ್ಯಾಕ್‌ ಗಳಿಂದ ದೂರವಿಡಲು ಕಾಲಕಾಲಕ್ಕೆ ಸೆಕ್ಯುರಿಟಿಗಳನ್ನು ಅಪ್ಡೇಟ್‌ ಮಾಡುತ್ತಲೇ ಇರುತ್ತವೆ.

ಆದರೂ ಕೆಲವೊಮ್ಮೆ ಲೋಪಗಳು ನಡೆಯುತ್ತವೆ. ಹಾಗಾಗಿ ಇಂಥಹ ಲೋಪಗಳನ್ನು ತಡೆದು ಜನರ ಮನಸ್ಸಿನಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ದೊಡ್ಡ ದೊಡ್ಡ ಟೆಕ್‌ ಕಂಪನಿಗಳು ಹೀಗೆ ಬಗ್‌ ಕಂಡು ಹಿಡಿದವರಿಗೆ ದೊಡ್ಡ ಮೊತ್ತದ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುತ್ತಾರೆ. ಭವಿಷ್ಯದಲ್ಲಿ ತಮ್ಮ ತಂತ್ರಜ್ಞಾನವನ್ನು ಹೆಚ್ಚು ಸುರಕ್ಷಿತವಾಗಿಡಲು ಇದು ಸಹಾಯಕವಾಗುತ್ತೆ. ಫೆಸ್ಬುಕ್‌, ಗೂಗಲ್‌ ನಂತಹ ಸಂಸ್ಥೆಗಳೂ ಈ ರೀತಿಯ ಬಗ್‌ ಬೌಂಟಿ ಕೊಡುಗೆ ನೀಡುತ್ತಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!