ಹೊಸದಿಗಂತ ಡಿಜಿಟಲ್ ಡೆಸ್ಕ್;
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,022 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಭಾನುವಾರಕ್ಕೆ ಹೋಲಿಸಿದರೆ 9% ಶೇಕಡಾ ಇಳಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ 46 ಮಂದಿ ಸಾವುಗಳು ವರದಿಯಾಗಿದ್ದು ಇಲ್ಲಿಯವರೆಗೆ ಒಟ್ಟೂ 5,24,459 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಇಲ್ಲಿಯವೆರೆಗೆ ಒಟ್ಟಾರೆಯಾಗಿ 4,31,38,393 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.
ದೇಶದಾದ್ಯಂತ 193 ಕೋಟಿಗೂ ಹೆಚ್ಚಿನ ಲಸಿಕೆ ವಿತರಿಸಲಾಗಿದೆ.