Wednesday, February 28, 2024

ಹೈದರಾಬಾದ್ ನಲ್ಲಿ ತಲೆಎತ್ತಲಿದೆ 216 ಅಡಿ ಎತ್ತರದ ರಾಮಾನುಜರ ಪ್ರತಿಮೆ: ಫೆ. 5 ರಂದು ಪ್ರಧಾನಿ ಮೋದಿಯಿಂದ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್ ನ ಮುಂಚಿಂತಲ್‌ ಪ್ರದೇಶದಲ್ಲಿರುವ ಚಿನ್ನ ಜೀಯರ್ ಆಶ್ರಮ , ಫೆಬ್ರವರಿ 2 ರಿಂದ 14 ರವರೆಗೆ ರಾಮಾನುಜಾಚಾರ್ಯರ 1,000ನೇ ವಾರ್ಷಿಕೋತ್ಸವ ಬಹಳ ಸಂಭ್ರಮದಿಂದ ನಡೆಸಲು ಸಜ್ಜಾಗುತ್ತಿದ್ದು. ಈ ವೇಳೆ ಇಲ್ಲಿ 216 ಅಡಿ ಎತ್ತರದಲ್ಲಿ ನಿರ್ಮಿಸಲಾದ ರಾಮಾನುಜರ ಪ್ರತಿಮೆ ಅಥವಾ ‘ಸಮಾನತೆಯ ಪ್ರತಿಮೆ’ಯನ್ನು ಅನಾವರಣಗೊಳಲ್ಲಿದೆ.
ವಿಶೇಷ ಅಂದರೆ ಖುದ್ದು ಪ್ರಧಾನಿ ಮೋದಿ ಅವರೇ ಫೆಬ್ರವರಿ 5 ರಂದು ಈ ಪ್ರತಿಮೆ’ಯನ್ನು ಅನಾವರಣಗೊಳಿಸಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ಕಾರ್ಯಾಲಯವು ದೃಢಪಡಿಸಿದ್ದು, ಪ್ರಧಾನಿಯವರ ವೇಳಾಪಟ್ಟಿಯಲ್ಲಿ ಫೆಬ್ರವರಿ 5 ರಂದು ಮಧ್ಯಾಹ್ನ 3.30ಕ್ಕೆ ಮೋದಿ ಆಶ್ರಮವನ್ನು ತಲುಪಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದೆ. ಬಳಿಕ ಅಲ್ಲಿ ನಡೆಯಿತು ಹೋಮಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದು, ಇವರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಸಾಥ್ ನೀಡಲಿದ್ದಾರೆ.
ರಾಮಾನುಜರ ಪ್ರತಿಮೆಯು ಸುಮಾರು ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಈ ಪ್ರದೇಶದಲ್ಲಿ 108 ಮಾದರಿ ದೇವಾಲಯಗಳು ಮತ್ತು 144 ಯಾಗ ಶಾಲೆಗಳಿವೆ. ಇನ್ನು ಪ್ರತಿ ಯಾಗ ಶಾಲೆಯಲ್ಲಿ ಒಂಬತ್ತು ಹೋಮ ಕುಂಡಗಳಿರುತ್ತವೆ.
ಫೆ.5 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಸುಮಾರು 5,000 ಪುರೋಹಿತರು ಮತ್ತು ವೇದ ಪಂಡಿತರು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಮಾನುಜರು 11ನೇ ಶತಮಾನದ ಸಮಾಜ ಸುಧಾರಕ, ಸಂತ, ವಿದ್ವಾಂಸ ಹಾಗೂ ದಾರ್ಶನಿಕ ಮತ್ತು ಶ್ರೀ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!