October 13, 2026
Tuesday, October 13, 2026
spot_img

ಗಗನಕ್ಕೇರಿದ ಹಳದಿ ಲೋಹದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆಭರಣ ಪ್ರಿಯರಿಗೆ ಮತ್ತು ಮದುವೆ ಸೀಸನ್‌ಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇಂದಿನ ಮಾರುಕಟ್ಟೆ ದರ ಭಾರಿ ಆಘಾತ ನೀಡಿದೆ. ಜಾಗತಿಕ ಆರ್ಥಿಕ ಏರಿಳಿತಗಳು ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ ಹತ್ತು ಗ್ರಾಂಗೆ ಗಣನೀಯವಾಗಿ ಹೆಚ್ಚಳವಾಗಿದೆ.

ಇಂದಿನ ಮಾರುಕಟ್ಟೆ ದರದ ಪ್ರಕಾರ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,515 ಆಗಿದ್ದು, 10 ಗ್ರಾಂ ಚಿನ್ನದ ದರ 1,45,150 ತಲುಪಿದೆ. ಇನ್ನು ಹೂಡಿಕೆಗೆ ಬಳಸಲಾಗುವ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,58,350 ಕ್ಕೆ ಏರಿಕೆಯಾಗಿದೆ.

ಇಂದು ಕುಸಿತ ಕಂಡ ಬೆಳ್ಳಿಯ ದರ:
ಇನ್ನು,ಬೆಳ್ಳಿಯ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಪ್ರತಿ ಕೆಜಿ ಬೆಳ್ಳಿಯ ಬೆಲೆ ಗಣನೀಯವಾಗಿ ಇಳಿಮುಖವಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆಯಲ್ಲಿ ಭಾರಿ ಮೊತ್ತದ ಇಳಿಕೆ ದಾಖಲಾಗಿದೆ. ಇಂದಿನ ಹೊಸ ದರದ ಪ್ರಕಾರ ಗ್ರಾಹಕರು 1 ಗ್ರಾಂ ಬೆಳ್ಳಿಯನ್ನು 280 ಕ್ಕೆ ಮತ್ತು 100 ಗ್ರಾಂ ಬೆಳ್ಳಿಯನ್ನು 28,000 ಕ್ಕೆ ಖರೀದಿಸಬಹುದಾಗಿದೆ. ಇನ್ನು ಭಾರಿ ಪ್ರಮಾಣದಲ್ಲಿ ಬೆಳ್ಳಿಯ ಗಟ್ಟಿ ಅಥವಾ ಪಾತ್ರೆ ಕೊಳ್ಳುವವರಿಗೆ ಅನುಕೂಲವಾಗಿದ್ದು, 1 ಕೆಜಿ ಬೆಳ್ಳಿಯ ದರ 2,80,000 ಕ್ಕೆ ತಲುಪಿದೆ.

Must Read