July 25, 2026
Saturday, July 25, 2026
spot_img

ಆರ್‌ಸಿಬಿ ಮ್ಯಾಚ್‌ ದಿನವೇ 240 ಸಿಸಿಟಿವಿ ಕೇಬಲ್‌ ಕಟ್‌, ಚಿನ್ನಸ್ವಾಮಿಯಲ್ಲಿ ಇದೆಂಥಾ ಲೋಪ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪವೊಂದು ಕಾಣಸಿಕ್ಕಿದೆ. ಐಪಿಎಲ್‌ ನಡೆಯುವ ದಿನದಂದೇ ಕ್ರೀಡಾಂಗಣದ ಪ್ರಮುಖ ಭದ್ರತಾ ವ್ಯವಸ್ಥೆ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ನ್ನು ಕತ್ತರಿಸಲಾಗಿದೆ.

ಇಡೀ ಭದ್ರತಾ ವ್ಯವಸ್ಥೆಯನ್ನೇ ಹಾಳು ಮಾಡಿ ವಿಧ್ವಂಸಕ ಕೃತ್ಯ ಎಸಗಲು ಪ್ರಯತ್ನಿಸಿದಂತೆ ಕಾಣಿಸುತ್ತಿದೆ. ಏ. 24 ರಂದು ರಾಯಲ್‌ ಚಾಲೆಂಜರ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ವಿರುದ್ಧ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯ ನಡೆಯುವ ದಿನವೇ ಸಿಸಿಟಿವಿ ಕೇಬಲ್‌ಗಳು ಕಟ್‌ ಆಗಿರುವ ವಿಷಯ ಗಮನಕ್ಕೆ ಬಂದಿದೆ.

ಅದು ಒಂದಲ್ಲಾ ಎರಡಲ್ಲಾ ಬರೋಬ್ಬರಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳು ಆಫ್‌ಲೈನ್‌ ಆಗಿರುವುದು ಪತ್ತೆಯಾಗಿದೆ. ಏಕಾಏಕಿ ಇಷ್ಟೊಂದು ಕ್ಯಾಮರಾಗಳು ಆಫ್‌ ಆಗಿರುವುದನ್ನು ಕಂಡು ಸಿಬ್ಬಂದಿ ಶಾಕ್‌ ಆಗಿದ್ದಾರೆ. ನಂತರ ತನಿಖೆ ನಡೆಸಿದ್ದು, ಈ ವೇಳೆ ಕಂಪನಿಯೊಂದರ ಇಬ್ಬರು ಐಟಿ ಎಂಪ್ಲಾಯಿಗಳು ಈ ಕೆಲಸ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಆರೋಪಿಗಳು ಕ್ರೀಡಾಂಗಣದೊಳಕ್ಕೆ ಬರಲು ಬೇಕಾದ ಪಾಸ್‌ ಹೊಂದಿರಲಿಲ್ಲ. ಹೀಗಾಗಿ ನಿಷ್ಟ್ಕ್ರಿಯಗೊಂಡ ಹಳೆ ಕಾರ್ಡ್‌ ಬಳಸಿ ಕ್ರೀಡಾಂಗಣವನ್ನು ಅನಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ಅದಕ್ಕಾಗಿ ಸಿಸಿಟಿವಿಯಲ್ಲಿ ಕಾಣಿಸಬಾರದೆಂದು ವೈರ್‌ಗಳನ್ನು ಕತ್ತರಿಸಿದ್ದಾರೆ.

ತಾವು ಕ್ರೀಡಾಂಗಣದ ಒಳಕ್ಕೆ ಬರೋದಕ್ಕಾಗಿ ಎಷ್ಟೊಂದು ದಿನಗಳಿಂದ ಮಾಡಿದ ಕೆಲಸವನ್ನು ಇವರಿಬ್ಬರು ಹಾಳು ಮಾಡಿದ್ದಾರೆ. ಅನುಮತಿ ಇಲ್ಲದೆ ಸಿಸಿಟಿವಿ ನಿಯಂತ್ರಣ ಕೊಠಡಿಗೆ ಬಂದಿರುವುದು ಹಾಗೂ ಪಾರ್ಕಿಂಗ್‌ ಲಾಟ್‌ ಬಳಿ ನಿಂತಿರುವ ದೃಶ್ಯ ಕಾಣಿಸಿದೆ. ಈ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !