ದಿನಭವಿಷ್ಯ | ನಿಮ್ಮ ನಿರೀಕ್ಷೆಯೊಂದು ಈಡೇರುವುದು, ಕೊರಗೊಂದು ನೀಗುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ನಿಮ್ಮ ನಿರೀಕ್ಷೆಯೊಂದು ಈಡೇರುವುದು. ದೊಡ್ಡ ಕೊರಗೊಂದು ನೀಗುವುದು. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಆರ್ಥಿಕ ಪರಿಸ್ಥಿತಿ ಸದೃಢ.

ವೃಷಭ
ಹಿರಿಯರೊಂದಿಗೆ ಅನವಶ್ಯ ವಾಗ್ವಾದಕ್ಕೆ ಇಳಿಯಬೇಡಿ. ಅದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋದೀತು. ಶಾಂತಿ, ಸಮಾಧಾನ ಇಂದು ಅವಶ್ಯ.

ಮಿಥುನ
ಯಾವುದೇ ಕಾರ್ಯಕ್ಕೆ ಕೈಹಾಕಿದರೂ ಇಂದು ಯಶಸ್ಸು. ಇತರರ ಜತೆ ಆರೋಗ್ಯಪೂರ್ಣ ಸಂಬಂಧಕ್ಕೆ ಆದ್ಯತೆ ಕೊಡಿ. ವೃಥಾ ಸಂಘರ್ಷ ಒಳಿತಲ್ಲ.

ಕಟಕ
ಪ್ರೀತಿಪಾತ್ರರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಆರ್ಥಿಕ ಕೊರತೆ ಬಾಧಿಸುವುದು.

ಸಿಂಹ
ಉತ್ಸಾಹದ ದಿನ. ಆಪ್ತೇಷ್ಟರ ಜತೆ ಅತಿಯಾದ ಭಾವುಕತೆಗೆ ಒಳಗಾಗುವಿರಿ. ನೋವು, ನಲಿವು ಎರಡೂ ಭಾವಗಳನ್ನು ಅನುಭವಿಸುವಿರಿ.

ಕನ್ಯಾ
ಶೀತ ಸಂಬಂಧಿ ಅನಾರೋಗ್ಯ ಕಾಡಬಹುದು. ಅನಿರೀಕ್ಷಿತ ಖರ್ಚು. ಸಂಬಂಧದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಿ.

ತುಲಾ
ವೈರುಧ್ಯಮಯ ಭಾವನೆಗಳನ್ನು ಅನುಭವಿಸುವಿರಿ. ಹೆಚ್ಚುವರಿ ಕೌಟುಂಬಿಕ ಹೊಣೆಗಾರಿಕೆ. ಮನಸ್ಸಿನ ಮೇಲೆ ಹತೋಟಿ ತಪ್ಪದಿರಿ.

ವೃಶ್ಚಿಕ
ಅಪರಿಚಿತ ವ್ಯಕ್ತಿಯೊಬ್ಬರು ನಿಮ್ಮ ಜೀವನ ಪ್ರವೇಶಿಸಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆ. ಆರೋಗ್ಯ  ಕಾಪಾಡಿ. ಆಹಾರ ಸೇವನೆಯಲ್ಲಿ ಹಿತಮಿತ ಪಾಲಿಸಿರಿ.

ಧನು
ಕೆರಿಯರ್‌ನಲ್ಲಿ ಅಭಿವೃದ್ಧಿ. ಉತ್ತಮ ಭವಿಷ್ಯದ ಮುನ್ಸೂಚನೆ. ಸಾಂಸಾರಿಕ ಸಮಸ್ಯೆ ಪರಿಹಾರ.  ಅನಿರೀಕ್ಷಿತ ಖರ್ಚುವೆಚ್ಚ ಬಂದೊದಗಬಹುದು.

ಮಕರ
ಬಂಧುತ್ವ ವೃದ್ಧಿ. ಭಿನ್ನಾಭಿಪ್ರಾಯ ನಿವಾರಣೆ. ಕೌಟುಂಬಿಕ ಸಮಸ್ಯೆಗಳು ನಿಧಾನ ಪರಿಹಾರದ ಸಂಕೇತಗಳು ತೋರಿಬರುತ್ತವೆ. ಮಾನಸಿಕ ನಿರಾಳತೆ.

ಕುಂಭ
ಅನಿರೀಕ್ಷಿತ ಕೆಲಸದ ಹೊರೆ ಬಿದ್ದೀತು. ಹಾಗೆಂದು ಚಿಂತೆ ಬೇಡ, ಎಲ್ಲವನ್ನೂ ಸರಿಯಾಗಿ ನಿಭಾಯಿಸಬಲ್ಲಿರಿ. ಬಂಧುಗಳಿಂದ ಶುಭ ಸುದ್ದಿ ಕೇಳಿಬಂದೀತು.

ಮೀನ
ಮನೆಯಲ್ಲಿ ಹರ್ಷದ ವಾತಾವರಣ. ಹಿರಿಯರಿಂದ ಲಾಭ. ವೃತ್ತಿಯಲ್ಲಿ ಗುಣಾತ್ಮಕ ಬೆಳವಣಿಗೆಗಳು. ಆರೋಗ್ಯ ಚಿಂತೆ ಪರಿಹಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!