Saturday, September 23, 2023

Latest Posts

ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಣೆ: ಇಬ್ಬರ ಬಂಧನ

ಹೊಸದಿಗಂತ ವರದಿ, ಕಲಬುರಗಿ:

ತಡರಾತ್ರಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 27 ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಠಾಣೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕೆಎ 22 ಸಿ 5831 ಸಂಖ್ಯೆಯ ವಾಹನದಲ್ಲಿ ಎಮ್ಮೆಗಳ ಬಾಯಿಗೆ ಮತ್ತು ಕಾಲಿಗೆ ಹಗ್ಗ ಕಟ್ಟಿ ಶಬ್ದ ಮಾಡದ ಹಾಗೇ ಚಿತ್ರಹಿಂಸೆ ಕೊಟ್ಟು ಸಾಗಾಟ ಮಾಡುತ್ತಿದ್ದರು. ಇನ್ನೂ ದಾಳಿ ವೇಳೆ ವಿಜಯಪುರ ಜಿಲ್ಲೆ ಮೂಲದವರಾದ ಚಾಲಕರಾದ ಉಮರ್ ಅಲಿ ಹುಸೇನ್ ಬಾಷಾ ಮತ್ತು ಅಬ್ದುಲ್ ರಜಾಕ್‌ʼʼರನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೂ ವಶಪಡಿಸಿಕೊಂಡ ಎಮ್ಮೆಗಳನ್ನು ಕಲಬುರಗಿಯ ನಂದಿ ಎನಿಮಲ್ ವೆಲ್‌ಫೆರ್ ಸೊಸೈಟಿಗೆ ಹಸ್ತಾಂತರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!