ತೋಟದ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತು ಪತ್ತೆ

ಹೊಸದಿಗಂತ ವರದಿ, ಬಾಗಲಕೋಟೆ:

ಬಾಗಲಕೋಟೆಯ ಹೊನ್ನಾಕಟ್ಟಿ ಗ್ರಾಮದಲ್ಲಿ ಅಂದಾಜು 250 ಕೆಜಿ ಲಘು ಸ್ಫೋಟಕ ವಸ್ತು ಹಾಗೂ 250 ಕೆಜಿ ಕಚ್ಚಾ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಹೊನ್ನಾಕಟ್ಟಿ ಗ್ರಾಮದ ತೋಟದ ಜಮೀನಿನಲ್ಲಿ ಮಂಜುನಾಥ್ ನಾರಾ ಮತ್ತು ಕಂಕನಮೇಲಿ ಎಂಬುವವರು ಲೀಜ್ ಪಡೆದಿದ್ದ ಜಮೀನಿನಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯವರು ಎಸ್ಪಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.
250ಕೆಜಿ ಲಘು ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಗಂಧಕ ಮತ್ತು ಸೋಡಿಯಂ ನೈಟ್ರೇಟ್, ಇದ್ದಿಲುಪುಡಿ ಪತ್ತೆಯಾಗಿದೆ. ಈ ಪೌಡರ್ ಗಳ ಬಳಸಿ ಸ್ಫೋಟಕ ತಯಾರಿಸಲು ಆರೋಪಿಗಳು ಮುಂದಾಗಿದ್ದರು.
ಕಲ್ಲು ಗಣಿಗಾರಿಕೆಗಾಗಿ ಅಪಾರ ಪ್ರಮಾಣದ ಸ್ಫೋಟಕ ತಂದಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!