ಬಿಸಿಯೂಟ ಸೇವಿಸಿದ್ದ 29 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಹೊಸದಿಗಂತ ವರದಿ, ಮಂಡ್ಯ:

ಬಿಸಿಯೂಟ ಸೇವಿಸಿದ 29 ಮಂದಿ ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಮದ್ದೂರು ತಾಲೂಕಿನ ಅಂಬರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಬಿಸಿಯೂಟ ಸೇವಿಸಿದ್ದ 29 ಮಕ್ಕಳು ಅಸ್ವಸ್ಥರಾಗಿದ್ದುಘಿ, ಎಲ್ಲರಿಗೂ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳು ಇದ್ದರು. ಎಂದಿನಂತೆ ಮಕ್ಕಳು ಊಟಕ್ಕೆ ಉಳಿತಿದ್ದಾರೆ, ಈ ಸಂದರ್ಭದಲ್ಲಿ ಸಾಂರ್ಬಾ ಇದ್ದ ಪಾತ್ರೆಗೆ ಹಲ್ಲಿಯೊಂದು ಬಿದ್ದಿದೆ. ಇದನ್ನರಿಯ ಬಿಸಿಯೂಟದ ಸಿಬ್ಬಂದಿ ಅದನ್ನೇ ಬಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಊಟ ತಿಂದ ನಂತರ 29 ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿದೆ.
ತಕ್ಷಣವೇ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಚಿಕಿತ್ಸೆಗೆಂದು ಮುಖ್ಯಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮಕ್ಕಳನ್ನು ದಾಖಲು ಮಾಡಿದ್ದಾರೆ. ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಊಟ ಮಾಡುತ್ತಿರುವಾಗ ಅಡುಗೆ ಪಾತ್ರೆಯಲ್ಲಿ ಹಲ್ಲೆ ಬಿದ್ದಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ ಅಷ್ಟರಲ್ಲಿ ಮಕ್ಕಳೆಲ್ಲ ವಾಂತಿ ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ನಾವು ಗಾಬರಿಗೊಂಡೆವು ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ತಿಳಿಸಿದ್ದಾರೆ.
ಶಿಕ್ಷಕ ಮಹೇಶ್ ಮಾತನಾಡಿ, ಬಿಸಿಯೂಟ ತಯಾರಿಸುವಾಗ ಕಣ್ತಪ್ಪಿನಿಂದ ಹಲ್ಲಿಯೊಂದು ಸಾಂರ್ಬಾ ಪಾತ್ರೆಗೆ ಅವರಿಗೆ ಅರಿವಿಲ್ಲದಾಗ ಬಿದ್ದಿರುವುದು ಕಂಡು ಬಂದಿದೆ. ಸದ್ಯ ಮಕ್ಕಳಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ, ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ. ದಾಖಲಾದ ಮಕ್ಕಳೆಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಆತಂಕ ಪಡುವುದು ಬೇಡ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!