Tuesday, March 28, 2023

Latest Posts

ಬೆಂಗಳೂರಿನ 2ನೇ ತರಗತಿ ವಿದ್ಯಾರ್ಥಿಗೆ ಬಂತು ಪ್ರಧಾನಿ ಮೋದಿಯಿಂದ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಎಲ್ಲಾ ವಯಸ್ಸಿನ ಜನರಿಗೂ ಅಚ್ಚುಮೆಚ್ಚು. ಅನೇಕರು ಪ್ರದೀನಿ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಸಮಸ್ಯೆಗಳನ್ನು ತಿಳಿಸುತ್ತಾರೆ. ಅದಕ್ಕೆ ಪ್ರಧಾನಿ ಮೋದಿ ಅವರು ಕೂಡ ಸ್ಪಂದಿಸುತ್ತಾರೆ.

ಅದೇ ರೀತಿ ವಿದ್ಯಾರ್ಥಿಗಳು , ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತಾರೆ. ತಮ್ಮಶೈಕ್ಷಣಿಕ ಸಮಸ್ಯೆ , ಪ್ರಧಾನಿಗಳ ಕಾರ್ಯ, ದೇಶ ಸೇವೆ, ಅವಿರತ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬರೆಯುತ್ತಾರೆ.ಅದಕ್ಕೆ ಪ್ರಧಾನಿ ಅವರು ಕೂಡ ಉತ್ತರ ನೀಡುತ್ತಾರೆ.

ಇತ್ತೀಚೆಗೆ ಪ್ರಧಾನಿ ಮೋದಿ(PM Narendra Modi) ತಾಯಿ ನಿಧನರಾದಾಗ, ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ವಿದ್ಯಾರ್ಥಿ ಮಲ್ಲೇಶ್ವರಂನ MES ಕಿಶೋರ ಕೇಂದ್ರ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಆರುಶ್ ಶ್ರೀವಾತ್ಸ್ ಪತ್ರ ಬರೆದು ಸಂತಾಪ ಸೂಚಿಸಿದ್ದನು.
ಇದೀಗ ಪತ್ರ ಬರೆದಿದ್ದ ವಿದ್ಯಾರ್ಥಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರದ ಮೂಲಕವೇ ಧನ್ಯವಾದ ತಿಳಿಸಿದ್ದಾರೆ.

ತಾಯಿಯ ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ಅದರ ನೋವು ಹೇಳತೀರದು ಎಂದಿದ್ದಾರೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಲ್ಲಿ ನನ್ನನ್ನು ಸೇರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರೀತಿ, ಸಾಂತ್ವನ ನನಗೆ ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯವನ್ನು ನೀಡುತ್ತವೆ ಎಂದು ಪತ್ರ ಬರೆಯುವ ಮೂಲಕ ಧನ್ಯವಾದ ಅರ್ಪಿಸಿರುವ ಪ್ರಧಾನಿ ಮೋದಿ.

ಪ್ರಧಾನಿಯಿಂದ ಪತ್ರ ಬಂದ ಹಿನ್ನೆಲೆ ವಿದ್ಯಾರ್ಥಿ ಹರ್ಷ ವ್ಯಕ್ತಪಡಿಸಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!