ಪುರಿಯಲ್ಲಿ 3 ಕೋಟಿ ಮೌಲ್ಯದ ಮಾದಕವಸ್ತು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಡಿಶಾದ ಪುರಿಯ ಮಂಗಲ ಘಾಟ್‌ ಚಕ್ಕಾ ಪ್ರದೇಶದಲ್ಲಿ 3 ಕೋಟಿ ಬೆಲೆಬಾಳುವ ಸುಮಾರು 3 ಕೆಜಿ ಮಾದಕದ್ರವ್ಯವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೋಲೀಸರು 3.12 ಕೆಜಿ ಮೌಲ್ಯದ ಬ್ರೌನ್‌ ಶುಗರ್‌ ಅನ್ನು ವಶಪಡಿಸಿಕೊಂಡಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಒಡಿಶಾ ಪೋಲೀಸ್‌ ವಿಭಾಗದ ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ ವತಿಯಿಂದ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರನ್ನು ಸುಶಾಂತ್‌ ಪಟ್ನಾಯಕ್‌ ಅಲಿಯಾಸ್‌ ನಂದಾ, ರಾಜ್‌ ಕಿಶೋರ್‌ ಸಾಹೂ, ,ಮಾನಸ್‌ ಸಾಹೂ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಅಂತರ್‌ ಜಿಲ್ಲಾ ಡ್ರಗ್‌ ಪೂರೈಕೆದಾರರಾಗಿದ್ದರು ಎನ್ನಲಾಗಿದೆ. ಬಂಧಿತರಿಂದ 20 ಸಾವಿರ ನಗದು, ನಾಲ್ಕು ಮೊಬೈಲ್‌, ಒಂದು ಕ್ಯಾಶ್‌ ಕೌಂಟಿಂಗ್‌ ಮಸೀನ್‌ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಇದು ಇಲ್ಲಿಯವರೆಗಿನ ಒಡಿಶಾ ಪೋಲೀಸ್‌ ಕಾರ್ಯಾಚರಣೆಯಲ್ಲಿ ಅತಿ ದೊಡ್ಡದು ಎನ್ನಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!