ಜಮ್ಮು ಕಾಶ್ಮೀರದಲ್ಲಿ ಮೂವರು ಎಲ್ಇಟಿ ಉಗ್ರರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಕಾಶ್ಮೀರದ ದರ್ಪೋರದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಎಲ್ಇಟಿ ಉಗ್ರರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಮ್ಮು ಕಾಶ್ಮೀರ ಪೊಲೀಸರು, ಜ.11ರಂದು ಸೊಪೊರೆ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್ ಇ ತೋಯ್ಬಾದ ಉಗ್ರರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಉಗ್ರರ ಬಳಿ ಇದ್ದ 2 ಪಿಸ್ತೂಲ್, 2 ಪಿಸ್ತೂಲ್ ಮ್ಯಾಗಜೀನ್, 13 ಪಿಸ್ತೂಲ್ ರೌಂಡ್ ಮತ್ತು ಹ್ಯಾಂಡ್ ಗ್ರನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!