ಪ್ರೋ ಕಬಡ್ಡಿ: ಅಗ್ರಸ್ಥಾನ ಉಳಿಸಿಕೊಂಡ ಬೆಂಗಳೂರು ಬುಲ್ಸ್- ದಾಖಲೆ ಮಾಡಿದ ರೈಡರ್ ಪವನ್ ಶೆರಾವತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೋ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ಮತ್ತೊಂದು ಜಯ ಗಳಿಸಿದೆ.
ನಿನ್ನೆ ನಡೆದ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 46-37 ಅಂಕಗಳಿಂದ ಬೆಂಗಳೂರು ಬುಲ್ಸ್ ಭರ್ಜರಿ ಜಯಗಳಿಸಿದೆ.
ಇಡೀ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ಗುಜರಾತ್ ಜೈಂಟ್ಸ್ ಸುಲಬಕ್ಕೆ ಸೋಲೊಪ್ಪಿಕೊಂಡಿಲ್ಲ. ತಂಡದ ರೇಡರ್ ರಾಕೇಶ್ 14 ಅಂಕ ಗಳಿಸಿದರು ಬೆಂಗಳೂರು ವಿರುದ್ಧ ಸೀಲುಣಬೇಕಾಯಿತು.
ಈ ಮೂಲಕ ಬೆಂಗಳೂರು ಇನ್ನು ಅಗ್ರಸ್ಥಾನದಲ್ಲೇ ಇದ್ದು, ಪಟ್ನಾ ಪೈರೇಟ್ಸ್ ಎರಡನೇ ಸ್ಥಾನಕ್ಕಿಳಿದಿದೆ.
ಈ ಪಂದ್ಯದಲ್ಲಿ ಪವನ್ ಶೆರಾವತ್ ಅವರು 19 ಅಂಕ ಗಳಿಸುವ ಮೂಲಕ ಇಡೀ ಪಂದ್ಯದಲ್ಲಿ ಮಿಂಚಿದ್ದಾರೆ. ಈ ಸೀಸನ್ ನಲ್ಲಿ ಪವನ್ ಗಳಿಸಿದ ಒಟ್ಟು ಅಂಗಳು 146ಕ್ಕೆ ಏರಿಕೆಯಾಗಿದೆ. ಈ ಹಿಂದೆ ಅತಿ ಹೆಚ್ಚು ಅಂಕ ಗಳಿಸಿದ್ದ ನವೀನ್ ಕುಮಾರ್ ಅವನರನ್ನು ಹಿಂದಿಕ್ಕಿ ಪವನ್ ಅಗ್ರಸ್ಥಾನದಲ್ಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!