Wednesday, June 7, 2023

Latest Posts

ಹರಿಯಾಣದ ರೈಸ್​ ಮಿಲ್​ ಕಟ್ಟಡ ಕುಸಿತ: 4 ಮಂದಿ ಸಾವು, 20 ಜನರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಹರಿಯಾಣದ ಕರ್ನಾಲ್​ನಲ್ಲಿರುವ ರೈಸ್​ ಮಿಲ್ ಕಟ್ಟಡ ಕುಸಿದ ಪರಿಣಾಮ ನಾಲ್ವರು ಮೃತಪಟ್ಟು, 20 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಹರಿಯಾಣದ ಕರ್ನಾಲ್ ನಲ್ಲಿ ರೈಸ್ ಮಿಲ್ ನ 3ನೇ ಮಹಡಿ ಕುಸಿದಿದೆ. ಕಟ್ಟಡ ಕುಸಿದಿರುವುದರಿಂದ ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಮಿಲ್‌ನ ಅವಶೇಷಗಳಡಿಯಲ್ಲಿ ಹಲವು ಕಾರ್ಮಿಕರು ಹೂತು ಹೋಗಿರಬಹುದು ಎಂದು ಹೇಳಲಾಗುತ್ತಿದೆ.

ಕಾರ್ಮಿಕರು ತಮ್ಮ ಪಾಳಿ ಮುಗಿದ ನಂತರ ಅಕ್ಕಿ ಗಿರಣಿಯಲ್ಲಿ ಮಲಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆ ತಿಳಿದ ಬಳಿಕ ಅಗ್ನಿಶಾಮಕ ದಳ, ಪೊಲೀಸರು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!