ದಿನ ಭವಿಷ್ಯ | ವೃತ್ತಿಕ್ಷೇತ್ರದಲ್ಲಿ ಸವಾಲು ಎದುರಿಸಲು ಸಹನೆ ಅಗತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ವೃತ್ತಿಕ್ಷೇತ್ರದಲ್ಲಿ ಸವಾಲು. ಅದನ್ನು ಎದುರಿಸಲು ಸಹನೆ ಅತೀ ಅವಶ್ಯ. ದುಡುಕಿನ ಕ್ರಮ ಪ್ರತಿಕೂಲವಾದೀತು. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ.

ವೃಷಭ
ಕೆಲಸದಲ್ಲಿ ಏಕಾಗ್ರತೆ ಕಳಕೊಳ್ಳದಿರಿ. ಮನಸ್ಸಿನಲ್ಲಿ ಕೆಲವಾರು ಗೊಂದಲಗಳು ಕಾಡುತ್ತವೆ. ಆತ್ಮೀಯ ಸಂಬಂಧದಲ್ಲಿ ಅತೃಪ್ತಿ ಮೊಳೆಯುತ್ತದೆ.

ಮಿಥುನ
ಕೆಲಸದ ಒತ್ತಡ ಅಧಿಕ. ಆರ್ಥಿಕ ಪರಿಸ್ಥಿತಿ ನಿರಾಶೆಗೆ ಕಾರಣವಾದೀತು. ಅಧಿಕ ಖರ್ಚು. ದೇಹಾಲಾಸ್ಯ, ದೈಹಿಕ ನೋವು ಕಾಡಬಹುದು.

ಕಟಕ
ಹಣದ ಸಮಸ್ಯೆ ನಿವಾರಣೆ. ಆದರೆ ಇನ್ನಿತರ ಕೆಲವು ಸಮಸ್ಯೆ ಕಾಡುತ್ತದೆ. ತಾಳ್ಮೆಯಿಂದ ವ್ಯವಹರಿಸಬೇಕು. ಸಣ್ಣ ವಿಚಾರಕ್ಕೂ ಹತಾಶೆಯ ಪ್ರತಿಕ್ರಿಯೆ ಬೇಡ.

ಸಿಂಹ
ಇತರರ ನೋವು, ದುಮ್ಮಾನಗಳಿಗೆ  ಕಿವಿಗೊಡಿ. ಅವರೂ ನಿಮಗೆ ಸ್ಪಂದಿಸುವರು.ಮನೆಯಲ್ಲಿನ ಪರಿಸ್ಥಿತಿ ನಿಮ್ಮ ಮನಸ್ಸಿನ ನೆಮ್ಮದಿ ಕೆಡಿಸುವುದು.

ಕನ್ಯಾ
ಇಂದು ನಿಮಗೆ ಎಂದಿನಂತಿಲ್ಲದ ದಿನ. ನಿಮ್ಮ ಮನಸ್ಥಿತಿ ಕೆಡಿಸುವ ಪ್ರಸಂಗ. ವೃತ್ತಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಬಹುದು. ಕೌಟುಂಬಿಕ ಏರುಪೇರು.

ತುಲಾ
ಹಣಕಾಸು ವಿಚಾರಕ್ಕೆ ಸಂಬಂಧಿಸಿ ನಿಮಗೆ ಪೂರಕ ಬೆಳವಣಿಗೆ. ಸಂಬಂಧದಲ್ಲಿ ಸಣ್ಣ ಅಸಮಾಧಾನ ಮೊಳೆತರೂ ಅದನ್ನು ಬೇಗನೆ ನಿವಾರಿಸಿ.

ವೃಶ್ಚಿಕ
ಇತರರ ಕುರಿತಂತೆ ನಿಮ್ಮ ಮನಸ್ಸು ಮುಕ್ತವಾಗಿ ಇಟ್ಟುಕೊಳ್ಳಿ. ಪೂರ್ವಗ್ರಹದಿಂದ ವರ್ತಿಸದಿರಿ. ನಡೆನುಡಿ  ನೋಡಿ ಬಳಿಕ ಅವರನ್ನು ನಿರ್ಧರಿಸಿರಿ.

ಧನು
ಮಾತಿನ ಮೇಲೆ ನಿಯಂತ್ರಣವಿರಲಿ. ದುಡುಕಿನ ಮಾತು ಸಂಬಂಧ ಕೆಡಿಸದಂತೆ ನೋಡಿಕೊಳ್ಳಿ. ಕಾಲು ನೋವು ಬಾಧಿಸಬಹುದು.

ಮಕರ
ಎಲ್ಲರ ಜತೆ ಹೊಂದಾಣಿಕೆಯಿಂದ ನಡಕೊಳ್ಳಿ. ಅನವಶ್ಯ ವಾಗ್ವಾದಕ್ಕೆ ಆಸ್ಪದ ಕಲ್ಪಿಸದಿರಿ. ಸಹನೆ ಕೆಣಕುವ ಪ್ರಸಂಗ ಉಂಟಾದೀತು.

ಕುಂಭ
ಶೀತ ಪ್ರಕೃತಿಯವರು ಹೆಚ್ಚು ಎಚ್ಚರ ವಹಿಸಿ. ಆರೋಗ್ಯ ಕೆಡುವ ಸಂಭವವಿದೆ. ಖರ್ಚು ನಿಯಂತ್ರಣ ಅವಶ್ಯ. ಸಂಬಂಧದಲ್ಲಿ ಸುಧಾರಣೆ.

ಮೀನ
ಸವಾಲಿನ ದಿನ. ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ. ಇತರರನ್ನು ಅವಲಂಬಿಸದಿರಿ. ಖರ್ಚು ಹೆಚ್ಚುವುದು. ಮಿತವ್ಯಯ ಸಾಧಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!