ಆಪ್ತಗೆಳೆಯ ಚಂದ್ರಶೇಖರ್‌ ಅಜಾದ್‌ ರನ್ನು ಉಳಿಸಲು ಶತಪ್ರಯತ್ನ ನಡೆಸಿದ್ದರು ಸುಖ್‌ದೇವ್‌ ರಾಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಖ್‌ದೇವ್‌ ರಾಜ್‌ ರದ್ದು ಬಹುದೊಡ್ಡ ಹೆಸರು. ಸುಖ್‌ ದೇವ್ 1907 ರ ಡಿಸೆಂಬರ್ 7 ರಂದು ಲಾಹೋರ್‌ನಲ್ಲಿ ಜನಿಸಿದರು. ಭಗವತಿ ಚರಣ್ ವೋಹ್ರಾ ಅವರ ಪ್ರಭಾವದಿಂದ ಅವರು ಕ್ರಾಂತಿಕಾರಿ ಚಳವಳಿಗೆ ಸೇರಿದರು.
ಅವರು ಪ್ರಚಂಡ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರೊಂದಿಗೆ ಸಖ್ಯವನ್ನು ಹೊಂದಿದ್ದರು. ಬ್ರಿಟೀಷ್ ವೈಸರಾಯ್ ರೈಲು ಸ್ಫೋಟಿಸುವ ಪ್ರಯತ್ನ, ಅಸೆಂಬ್ಲಿಗೆ ಬಾಂಬ್ ಎಸೆತ, ಕ್ರೂರ ಅಧಿಕಾರಿ ಸ್ಯಾಂಡರ್ಸನ ಹತ್ಯೆ ಯತ್ನದಂತಹ ಚಟುವಟಿಕೆಗಳನ್ನು ನಡೆಸಿ ಬ್ರಟೀಷರಿಗೆ ಸಿಂಹಸ್ವಪ್ನರಾಗಿದ್ದ ಚಂದ್ರಶೇಖರ್‌ ಅಜಾದ್‌ ತಮ್ಮ ಗೆಳೆಯ ಸುಖ್‌ ದೇವ್‌ ರನ್ನು ಭೇಟಿಯಾಗಲು 1931 ರ ಫೆಬ್ರವರಿ 27 ರಂದು ಅಲಹಾಬಾದ್‌ನ ಅಲಹಾಬಾದ್‌ನ ಆಲ್‌ಫ್ರೆಡ್ ಪಾರ್ಕ್‌ಗೆ ಬಂದಿದ್ದಾಗ ಬ್ರಿಟೀಷ್‌ ಸೈನಿಕರು ಅವರನ್ನು ಸುತ್ತುವರೆದರು.
ಆದರೆ ಅಜಾದ್‌ ಹಾಗೂ ಸುಖ್‌ ದೇವ್‌ ಎದೆಗುಂದದೆ ಅವರೊಂದಿಗೆ ಗುಂಡಿನ ಕಾಳಗ ನಡೆಸಿದರು. ಸುಖ್‌ ದೇವ್‌ ಹೋರಾಡುತ್ತಲೇ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜೊತೆಗೆ ಆಪ್ತಗೆಳೆಯನ ರಕ್ಷಿಸಲು ಶತಪ್ರಯತ್ನ ನಡೆಸಿದರು. ಆದರೆ ಅಜಾದ್‌ ಬಳಿ ಒಂದೇ ಒಂದು ಗುಂಡು ಉಳಿದುಕೊಂಡಾಗ, ಅವರು ಅದನ್ನು ತನಗೆ ಹಾರಿಸಿಕೊಂಡು ಹುತಾತ್ಮರಾದರು. ಮತ್ತು ತಾನು ಎಂದೂ ಬ್ರಿಟೀಷರ ಬಂಧಿಯಾಗುವುದಿಲ್ಲ ಎಂಬ ತಮ್ಮ ಸಂಕಲ್ಪಕ್ಕೆ ತಕ್ಕಂತೆ ಬದುಕಿದರು.
ಕೆಲ ಸಮಯದ ಬಳಿಕ ಬ್ರಿಟೀಷರಿಗೆ ಸೆರೆಸಿಕ್ಕ ಸುಖ್‌ ದೇವ್ ರಾಜ್ ಎರಡು ಅವಧಿಗಳಲ್ಲಿ ಸುದೀರ್ಘ ಆರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. ಸ್ವಾತಂತ್ರ್ಯಾ ನಂತರದ ಜೀವನದಲ್ಲಿ ವಿನೋಬಾ ಭಾವೆ ಅವರ ಪ್ರಭಾವದಿಂದ, ಅವರು ಕುಷ್ಠ ರೋಗಿಗಳ ಸೇವೆಗಾಗಿ ದುರ್ಗಕ್ಕೆ ಬಂದರು ಮತ್ತು ಅವರಿಗಾಗಿ ಆಶ್ರಮವನ್ನು ಸ್ಥಾಪಿಸಿದರು. ಅವರು 5 ಜುಲೈ 1973 ರಂದು ದುರ್ಗ್‌ನಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!