Thursday, March 23, 2023

Latest Posts

ಹಸು ದಾಳಿಗೆ ಯುವತಿ ಆಸ್ಪತ್ರೆ ಪಾಲು: ಭಯಾನಕ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸ್ತೆಯಲ್ಲಿ ಸಂಚರಿಸುವ ಜಾನುವಾರು, ಪ್ರಾಣಿಗಳು ಮಾನವನ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ ಅವುಗಳ ಅನಿರೀಕ್ಷಿತ ದಾಳಿಗೆ ಜೀವಗಳು ಬಲಿಯಾಗುತ್ತಿವೆ. ಹೈದರಾಬಾದ್‌ನಲ್ಲಿ ಬೀದಿ ನಾಯಿಗಳು ಮಗುವಿನ ಮೇಲೆ ಅಮಾನುಷವಾಗಿ ದಾಳಿ ಮಾಡಿ ಕೊಂದು ಹಾಕಿದ್ದವು. ಬಳ್ಳಾರಿಯಲ್ಲೂ ಬೀದಿ ನಾಯಿ ದಾಳಿಗೆ ಮಗುವೊಂದು ಬಲಿಯಾಗಿದೆ.

ಇತ್ತೀಚೆಗಷ್ಟೇ ಗುಜರಾತ್ ನ ಅಹಮದಾಬಾದ್ ನಲ್ಲಿ ಹಸುವೊಂದು ಅವಾಂತರ ಸೃಷ್ಟಿಸಿತ್ತು. ಹಟಕೇಶ್ವರ ಪ್ರದೇಶದಲ್ಲಿ ಶನಿವಾರ ಯುವತಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಸು ದಾಳಿ ಮಾಡಿದೆ. ಕೊಂಬುಗಳಿಂದ ತಿವಿದಿದ್ದು, ಯುವತಿಯ ತಲೆಗೆ ತೀವ್ರ ಪೆಟ್ಟಾಗಿ ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪಡೆಯುತ್ತಿದೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ರಸ್ತೆ ಸಂಚಾರ ದಟ್ಟಣೆಯಿಂದ ಕೂಡಿದೆ. ಅಲ್ಲಿಗೆ ಬಂದ ಯುವತಿಯೊಬ್ಬಳು ರಸ್ತೆ ದಾಟುವ ತವಕದಲ್ಲಿದ್ದಾಳೆ. ಅಷ್ಟರಲ್ಲಿ ಹಸು ಕೊಂಬುಗಳಿಂದ ತನ್ನ ಮುಂದೆ ನಿಂತಿದ್ದ ಯುವತಿಯನ್ನು ಎತ್ತಿ ಹಾಕಿದೆ. ಘಟನೆಯಲ್ಲಿ ಪಾರ್ವತಿ ಕಲಾರಿಯಾ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!