Thursday, March 30, 2023

Latest Posts

ಸಮುದ್ರದ ಮಧ್ಯೆ ಬಂಡೆಗೆ ಡಿಕ್ಕಿಯಾಗಿ ಎರಡು ತುಂಡಾದ ದೋಣಿ, 60 ವಲಸಿಗರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಟಲಿಯ ದಕ್ಷಿಣ ಕರಾವಳಿಯ ಬಳಿ ದೋಣಿ ಮುಳುಗಿ ಭಾರೀ ಅವಘಡ ಸಂಭವಿಸಿದೆ.

ಅಪಘಾತದಲ್ಲಿ 28 ಪಾಕಿಸ್ತಾನಿಗಳು ಸೇರಿ 60 ಮಂದಿ ವಲಸಿಗರು ಮೃತಪಟ್ಟಿದ್ದಾರೆ. ಇಟಾಲಿಯನ್ ಕೋಸ್ಟ್ ಗಾರ್ಡ್ ಈಗಾಗಲೇ ೩೦ಕ್ಕೂ ಹೆಚ್ಚು ಶವಗಳನ್ನು ಹೊರತೆಗೆದಿದ್ದಾರೆ.

ವಲಸೆ ಕಾರ್ಮಿಕರಿದ್ದ ದೋಣಿ ಸಮುದ್ರ ಮಧ್ಯದಲ್ಲಿ ಎರಡು ತುಂಡಾಗಿದೆ. ಕೆಟ್ಟ ಹವಾಮಾನಗಳಿಂದ ಬಂಡೆಗಳಿಗೆ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ದೋಣಿ ಎರಡು ಭಾಗವಾಗಿದ್ದು, ಜನರು ನೀರಿಗೆ ಬಿದ್ದಿದ್ದಾರೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ವಲಸೆ ಕಾರ್ಮಿಕರನ್ನು ಈ ದೋಣಿ ಹೊತ್ತೊಯ್ಯುತ್ತಿದ್ದು, ದೋಣಿಯಲ್ಲಿ ಸುಮಾರು 100 ಜನ ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡ ಈಗಾಗಲೇ 40 ಜನರನ್ನು ರಕ್ಷಣೆ ಮಾಡಿದೆ. ಬದುಕಿರುವವರಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!