ಅಸ್ಸಾಂ ನಲ್ಲಿ ಅಲ್‌ಖೈದಾದೊಂದಿಗೆ ಸಂಪರ್ಕ ಹೊಂದಿರುವ 34 ಜನರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಸ್ಸಾಂ ರಾಜ್ಯದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ 34ಕ್ಕೂ ಹೆಚ್ಚು ಜನರನ್ನು ಪೋಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ್‌ ಮಾತನಾಡಿದ್ದು “ಅಲ್-ಖೈದಾದೊಂದಿಗೆ ಸಂಬಂಧ ಹೊಂದಿರುವ 34 ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಅಸ್ಸಾಂ ಪೊಲೀಸರು ಈ ರೀತಿಯ ಪಿತೂರಿಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ. ಕೆಲವು ಸೇನಾ ತರಬೇತಿ ಶಿಬಿರಗಳನ್ನು ಬಾಂಗ್ಲಾದೇಶಿಗಳು ಸ್ಥಾಪಿಸಿದ್ದಾರೆ. ರಾಜ್ಯದಲ್ಲಿ ಕೆಲವು ಹೊಸ ಗುಂಪುಗಳು ಮೊಳಕೆಯೊಡೆಯುತ್ತಿವೆ. ಯುವಕರನ್ನು ದುರುಪಯೋಗಪಡಿಸಿಕೊಂಡು ಮೂಲಭೂತವಾದವನ್ನು ಹರಡಲು ಯತ್ನಿಸಲಾಗುತ್ತಿದೆ” ಎಂದಿದ್ದಾರೆ.

“ಅಸ್ಸಾಂನಲ್ಲಿ ವಿವಿಧ ರೀತಿಯ ಮದರಸಾಗಳ ಗುಂಪುಗಳಿವೆ. ಕೆಲವು ಹೊಸ ಗುಂಪುಗಳು ಮೊಳಕೆಯೊಡೆದು ಲಾಭ ಪಡೆಯುತ್ತಿವೆ. ಅಸ್ಸಾಂನ ಹೊರಗಿನಿಂದ ಸಂಚು ರೂಪಿಸಲಾಗುತ್ತಿದೆ, ಪ್ರಸ್ತುತ ಬಾಂಗ್ಲಾದೇಶ ಮತ್ತು ಅಲ್-ಖೈದಾ-ಸಂಯೋಜಿತ ಗುಂಪುಗಳಿಂದ ಮೂಲಭೂತವಾದವನ್ನು ಹರಡಲು ಯುವಕರ ಮೇಲೆ ಪ್ರಭಾವ ಬೀರುತ್ತಿದೆ” ಎಂದು ಡಿಜಿಪಿ ಬಿಜೆ ಮಹಂತ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!