ಟಿಡಿಪಿ ನಾಯಕ ಚಂದ್ರಬಾಬುಗೆ ಎನ್‌ಎಸ್‌ಜಿ ಭದ್ರತೆ: ಕ್ಷೇತ್ರದಲ್ಲಿ ಅಖಾಡಕ್ಕಿಳಿದ ತಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಭದ್ರತೆ ಒದಗಿಸಲಾಗಿದೆ. ಸ್ವತಃ ಎನ್ಎಸ್‌ಜಿ ಡಿಐಜಿ ಅವರೇ ಖುದ್ದು ಬಂದೋಬಸ್ತ್‌ ವಹಿಸಿದ್ದಾರೆ. ಮಂಗಳಗಿರಿಯಲ್ಲಿರುವ ಟಿಡಿಪಿ ಕೇಂದ್ರ ಕಚೇರಿಗೆ ತೆರಳಿದ ಎನ್‌ಎಸ್‌ಜಿ ಡಿಐಜಿ ಸಮೀರ್ ದೀಪ್ ಸಿಂಗ್,  ಚಂದ್ರಬಾಬು ಭದ್ರತೆ ಕುರಿತು ಪ್ರಮುಖ ಸೂಚನೆ ನೀಡಿದರು.

ಚಂದ್ರಬಾಬು ರ್ಯಾಲಿ, ಸಭೆ-ಸಮಾರಂಭದ ವೇಳೆ ಸದಾ ಘರ್ಷಣೆಗಳು ನಡೆಯುತ್ತಿವೆ. ಪೊಲೀಸರು ಸಹ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಟಿಡಿಪಿ ಕೇಂದ್ರಕ್ಕೆ ದೂರು ನೀಡಿದೆ. ಚಂದ್ರಬಾಬು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕಾಗಿ ಎನ್‌ಎಸ್‌ಜಿ ತಂಡ ಚಂದ್ರಬಾಬು ಭದ್ರತೆಗೆ ವಿಶೇಷ ಗಮನ ಹರಿಸಿದೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ. ಈಗಾಗಲೇ ಉಂಡವಳ್ಳಿಯಲ್ಲಿರುವ ಚಂದ್ರಬಾಬು ನಿವಾಸವನ್ನು ಪರಿಶೀಲನೆ ನಡೆಸಿರುವ ಎನ್ ಎಸ್ ಜಿ ತಂಡ, ಇತ್ತೀಚೆಗೆ ಟಿಡಿಪಿ ಕೇಂದ್ರ ಕಚೇರಿಯ ಪ್ರತಿ ಕೊಠಡಿಯನ್ನು ಪರಿಶೀಲನೆ ನಡೆಸಿ, ನಡೆದ ದಾಳಿಯ ಬಗ್ಗೆಯೂ ಕಚೇರಿ ಸಿಬ್ಬಂದಿಯನ್ನು ವಿಚಾರಿಸಿ ವಿವರ ಪಡೆದರು.

ಕುಪ್ಪಂನಲ್ಲಿ ಚಂದ್ರಬಾಬು ಮೇಲೆ ಹಲ್ಲೆ ಯತ್ನವನ್ನು ಟಿಡಿಪಿ ಗಂಭೀರವಾಗಿ ಪರಿಗಣಿಸಿದೆ. ಅಗತ್ಯವಿದ್ದರೆ ಮತ್ತೊಮ್ಮೆ ಕೇಂದ್ರಕ್ಕೆ ದೂರು ನೀಡುವ ಸಾಧ್ಯತೆಗಳೂ ಇವೆಯಂತೆ. ಚಂದ್ರಬಾಬು ಮುಂದಿನ ವಾರ ಕುಪ್ಪಂ ಪ್ರವಾಸ ಮುಗಿಸಿ ಅಮರಾವತಿಗೆ ಬರಲಿದ್ದಾರೆ. ಏನೇ ಆಗಲಿ, ಎನ್ ಎಸ್ ಜಿ ಡಿಐಜಿ ಅವರೇ ಕ್ಷೇತ್ರಕ್ಕೆ ಆಗಮಿಸಿ, ಎಪಿಗೆ ಬಂದು ಚಂದ್ರಬಾಬು ನಿವಾಸ ಹಾಗೂ ಟಿಡಿಪಿ ಕೇಂದ್ರ ಕಚೇರಿಯಲ್ಲಿ ಭದ್ರತೆಯ ಮೇಲೆ ನಿಗಾ ಇಡುತ್ತಿರುವುದು ಚಂದ್ರಬಾಬು ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಎನ್ನುತ್ತಿವೆ ಟಿಡಿಪಿ ಮೂಲಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!