Tuesday, March 28, 2023

Latest Posts

ಬೆಣ್ಣೆದೊಸೆ ನಗರಿ ದಾವಣಗೆರೆಯಲ್ಲಿ 38 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ : ತಗಡೂರ ಘೋಷಣೆ

ಹೊಸದಿಗಂತ ವರದಿ ವಿಜಯಪುರ :

ಮುಂದಿನ 38 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಮಧ್ಯಕರ್ನಾಟಕದ ಬೆಣ್ಣೆದೊಸೆ ಖ್ಯಾತಿಯ ನಗರಿ ದಾವಣಗೇರಿಯಲ್ಲಿ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ 37ನೇ ರಾಜ್ಯ ಮಟ್ಟದ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದ ಮೊದಲ ದಿನವಾದ ಶನಿವಾರ ಹಮ್ಮಿಕೊಂಡ ಸರ್ವ ಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಮುಂದಿನ ಸಮ್ಮೇಳನ ದಾವಣಗೇರಿ, ಚಿತ್ರದುರ್ಗ, ತುಮಕೂರು, ಉಡುಪಿ, ಕೋಲಾರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ನಡೆಸಲು ಬೇಡಿಕೆ ಇಡಲಾಗಿತ್ತು. ಸರ್ವ ಪ್ರತಿನಿಧಿಗಳ ಸಭೆಯಲ್ಲಿ ಅಂತಿಮವಾಗಿ ತೀರ್ಮಾನಿಸಿ ದಾವಣಗೆರೆಯಲ್ಲಿ ಸಮ್ಮೇಳನ ನಡೆಸಲು ನಿರ್ಣಯಿಸಿ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಘೋಷಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!