3ನೇ ಟಿ20: ಭಾರತಕ್ಕೆ147 ರನ್​ಗಳ ಸಾಧಾರಣ ಗುರಿ ನೀಡಿದ ಶ್ರೀಲಂಕಾ

ಹೊಸ ದಿಗಂತ ಡಿಜಿಟ್ಟ್ ಡೆಸ್ಕ್

ಅಗ್ರ ಕ್ರಮಾಂಕದ ಬ್ಯಾಟರ್ ಗಳ ಬ್ಯಾಟಿಂಗ್ ವೈಫಲ್ಯದ ಬಳಿಕ ನಾಯಕ ದಸುನ್ ಶನಕ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 74 ರನ್​ ಗಳಿಸಿದ್ ಪರಿಣಾಮ ಲಂಕಾ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಗಿದೆ. ಶನಕ ಹೊರೆತುಪಡಿಸಿದರೆ ವಿಕೆಟ್ ಕೀಪರ್​ ದಿನೇಶ್ ಚಂಡಿಮಲ್ 25 ರನ್​ಗಳಿಸಿದರು.
ಇದೀಗ ಗೆಲ್ಲಲು ಭಾರತಕ್ಕೆ 147 ರನ್ ಬೇಕಿದೆ.
ಕೊನೆಯ ಪಂದ್ಯವನ್ನಾದರೂ ಗೆದ್ದ ವೈಟ್​​ವಾಷ್​ ಮುಖಭಂಗವನ್ನು ತಪ್ಪಿಸಿಕೊಳ್ಳುವ ಇರಾದೆಯಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!