ತುಷ್ಠಿಕರಣ ರಾಜಕೀಯಕ್ಕೆ ದೇಶ ದಿವಾಳಿ: ಸಚಿವ ಪ್ರಹ್ಲಾದ್ ಜೋಶಿ

ಹೊಸ ದಿಗಂತ ವರದಿ, ಧಾರವಾಡ:

ಸ್ವಾತಂತ್ರ್ಯ ಬಂದಾಗಿನಿoದಲೂ ಕಾಂಗ್ರೆಸ್ ಮುಸ್ಲಿಂ ತುಷ್ಠಿಕರಣ ರಾಜಕೀಯದಿಂದ ದೇಶ ಅಧೋಗತಿಗೆ ತಳ್ಳಲ್ಪಟ್ಟಿದೆ. ಇದರ ಪರಿಣಾಮ ಹಿಂದೂ ಮುಖಂಡರ ಕಗ್ಗೋಲೆ ಎಗ್ಗಿಲ್ಲದೇ, ನಡೆದಿವೆ. ಹಿಂದೂ ಸಮಾಜ ಜಾಗೃತಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಭಜರಂಗದಳ ಧಾರವಾಡ ಜಿಲ್ಲಾ ಘಟಕ ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ, ನಗರದ ಕಡಪಾ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡ ಬೃಹತ್ ಹಿಂದೂ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಓಟ್ ಬ್ಯಾಂಕ್ ರಾಜಕಾರಣಕ್ಕೆ ದೇಶ ದಿವಾಳಿಯಾಗಿದೆಂದು ತಿಳಿಸಿದರು.
ಜಾತ್ಯಾತೀತೆ ಉಳಿಯಲು ಹಿಂದೂ ಬಹುಮತ ಬೇಕು. ಇಸ್ಲಾಂ ರಾಷ್ಟçದಲ್ಲಿ ಜಾತ್ಯಾತೀತತೆ ಇಲ್ಲ. ನಿತ್ಯ ಬೆಳಗಾದರೆ ಜಾತ್ಯಾತೀತದ ಕುರಿತು ಸ್ವಲ್ಲೆತ್ತುವ ಸಿದ್ಧರಾಮಯ್ಯ, ಇಸ್ಲಾಂ ರಾಷ್ಟçಕ್ಕೆ ಹೋಗಿ ಜಾತ್ಯಾತೀತತೆ ಬಗ್ಗೆ ಧ್ವನಿ ಎತ್ತಿದರೆ, ಅವರು ಉಳಿಯುವುದೇ ಅನುಮಾನ ಸಚಿವ ಜೋಶಿ ಟೀಕೆ ಮಾಡಿದರು.
ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾದ ಕುಂದಗೋಳದ ಹಿಂದೂ ಮಹಿಳೆ, ಪ್ರವೀಣ ಪೂಜಾರಿ, ಕುಟಪ್ಪ, ರುದ್ರೇಶ, ಯೋಗೇಶಗೌಡ, ಶರತ್ ಮಡಿವಾಳರ, ರಮೇಶ ಹಾಗೂ ಇದೀಗ ಹರ್ಷ ಹತ್ಯೆಗೈಯಲು ದುಷ್ಕರ್ಮಿಗಳಿಗೆ ಧೈರ್ಯ ಎಲ್ಲಿಂದ ಬರುತ್ತಿದೆಂದು ಕಾಂಗ್ರೆಸ್ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಹತ್ಯೆಕೋರರ ರಕ್ಷಣೆಗೆ ಕಾಂಗ್ರೆಸ್

ಭಯೋತ್ಪಾದನೆ ಚಟವಟಿಕೆ ನಡೆಸುತ್ತಿದ್ದ ಸಿಮಿ ಸಂಘಟನೆ ನಿಷೇಧದ ಬಳಿಕ ಆ ಕಾರ್ಯಕರ್ತರು, ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಜತೆಗೆ ಸೇರಿಕೊಂಡು, ಹಿಂದೂ ಕಾರ್ಯಕರ್ತರನ್ನು ಮತ್ತು ಬಿಜೆಪಿ ಮುಖಂಡರನ್ನು ಹತ್ಯೆ ಮಾಡುತ್ತಿದ್ದಾರೆ. ಇಂಥವರ ರಕ್ಷಣೆಗೆ ಕಾಂಗ್ರೆಸ್ ನಿಂತಿರುವುದಕ್ಕೆ ಬೇಸರಿಸಿದರು.
ಹಿಂದೂಗಳಿಗೆ ‘ಹಮ್ ದೋ, ಹಮಾರೇ ದೋ’, ಮುಸ್ಲಿಂರಿಗೆ ಪಾಂಚ್ ಮೇ ಪಚ್ಚೀಸ್ ಎಂಬ ವಾತಾವರಣ ನಿರ್ಮಿಸಿದರು. ಇದರ ಪರಿಣಾಮವೇ ದೇಶದ ಜನಸಂಖ್ಯೆ ಹೆಚ್ಚಳದ ಜತೆ ಹಿಂದೂ ವೈರತ್ವ ಹೆಚ್ಚಿತು. ಹೀಗಾಗಿ ತುಷ್ಠಿಕರಣ ರಾಜಕಾರಣ ಮಾಡುವವರನ್ನು ದೂರ ಇಡಬೇಕು ಎಂದು ಹೇಳಿದರು.
ಕಾಂಗ್ರೆಸ್ ತ್ರಿವಳಿ ತಲಾಖ್ ವಿರೋಧಿಸಿತು. ಹಿಜಾಬ್ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತಿತು. ಈ ಬಗ್ಗೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಸುದ್ದಿ ಮಾಡುವ ದೊಡ್ಡ ಷಡ್ಯಂತ್ರ ಮಾಡಿತು. ಹೀಗಾಗಿ ಹಿಂದೂಗಳು ಮೈಮರೆಯಬಾರದು. ಮೈಯಲ್ಲ ಕಣ್ಣಾಗಿಸಿ, ಧರ್ಮ ರಕ್ಷಣೆಗೆ ಮುಂದಾಗಲು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!