ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಡಮಾನ್ ಮತ್ತು ನಿಕೋಬಾರ್ ನ ಧಿಗಿಲ್ ಪುರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ ಎಂದು ಭಾರತೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.
ಇಂದು ಮುಂಜಾನೆ 7.50ರ ಸುಮಾರಿಗೆ ದಿಗಿಲ್ ಪುರದ ಸಮೀಪ ಕಾಣಿಸಿಕೊಂಡ ಭೂಕಂಪವು 4.3ರಷ್ಟು ತೀವ್ರತೆ ದಾಖಲಿಸಿದ್ದು ಭೂಕಂಪದ ಆಲ 32 ಕಿ.ಮಿ.ನಷ್ಟಿದೆ ಎಂದು ಭೂಕಂಪಮಾಪನ ಕೇಂದ್ರ ತಿಳಿಸಿದೆ.