ಇರಾನ್‌ ನಿಂದ ಕಳ್ಳಸಾಗಣೆಯಾಗಿದ್ದ 500 ಕೋಟಿ ಮೌಲ್ಯದ ಕೊಕೇನ್ ವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನ ಬಳಿ ಕಂಟೈನರ್‌ ಒಂದರಲ್ಲಿದ್ದ ಸುಮಾರು 500 ಕೋಟಿ ಬೆಲೆಬಾಳುವ 56 ಕೆಜಿ ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ.
ಮಾದಕ ವಸ್ತು ಕಳ್ಳಸಾಗಣೆ ಕುರಿತಾಲಿ ಲಭ್ಯವಾದ ಮಾಹಿತಿ ಮೇರೆಗೆ, ಕೆಲ ದಿನಗಳ ಹಿಂದೆ ಇರಾನ್‌ ನಿಂದ ಮುಂದ್ರಾ ಬಂದರಿಗೆ ಬಂದ ಕಂಟೇನರ್ ಒಂದನ್ನು ಡಿಆರ್‌ಐ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿದ ವೇಳೆ 56 ಕೆಜಿ ಕೊಕೇನ್ ಪತ್ತೆಯಾಗಿದೆ. ಇರಾನ್‌ ನಿಂದ ಆಮದು ಮಾಡಿಕೊಂಡ ವಸ್ತುಗಳೊಳಗೆ ಡ್ರಗ್ಸ್‌ ನ್ನು ಅಡಗಿಸಿಡಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಡಿಆರ್‌ ಐ ತಂಡಗಳು ಅಮ್ರೇಲಿ ಜಿಲ್ಲೆಯ ಪಿಪಾವಾವ್ ಬಂದರಿನಲ್ಲಿ ‌ನಡೆಸಿದ ಕಾರ್ಯಾರಣೆಗೆಯಲ್ಲಿ ಇರಾನ್‌ನಿಂದ ಆಗಮಿಸಿದ ಹಡಗಿನ ಕಂಟೈನರ್‌ನಿಂದ ಸುಮಾರು 450 ಕೋಟಿ ರೂಪಾಯಿ ಮೌಲ್ಯದ 90 ಕಿಲೋಗ್ರಾಂ ಹೆರಾಯಿನ್ ವಶಪಡೆಯಲಾಗಿತ್ತು. 2021- 22 ನೇ ಸಾಲಿನಲ್ಲಿ ಈ ವರೆಗೆ ಪಟ್ಟರೆಯಾಗಿ 321 ಕೆಜಿ ಕೊಕೆನ್‌ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 3,2೦೦ ಕೋಟಿಯಷ್ಟಾಗುತ್ತದೆ ಎಂದು ಡಿಆರ್‌ ಡಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!