Thursday, March 23, 2023

Latest Posts

ಪ್ರಪಂಚದ ಹಲವೆಡೆ ನಡುಗುತ್ತಿರುವ ಭೂಮಿ: ಅಫ್ಘಾನಿಸ್ತಾನದಲ್ಲಿ 4.3ತೀವ್ರತೆಯ ಭೂಕಂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರಣಿ ಭೂಕಂಪಗಳು ಜಗತ್ತನ್ನು ನಡುಗಿಸುತ್ತಿವೆ. ಟರ್ಕಿ ಮತ್ತು ಸಿರಿಯಾದಲ್ಲಿ ಭಾರಿ ಭೂಕಂಪಗಳ ನಂತರ, ಇತರೆ ದೇಶಗಳಲ್ಲಿಯೂ ಭೂಕಂಪಗಳು ಸಂಭವಿಸುತ್ತಿವೆ. ಇದೀಗ ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಭೂಮಿ ನಡುಗಿದೆ.

ಭಾನುವಾರ ಬೆಳಗಿನ ಜಾವ 2:14ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.3 ರಷ್ಟು ದಾಳಕಾಗಿದ್ದು, ಫೈಜಾಬಾದ್‌ನ ಪೂರ್ವ-ಈಶಾನ್ಯಕ್ಕೆ 273 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪದ ಕೇಂದ್ರಬಿಂದು 180 ಕಿ.ಮೀ ಆಳದಲ್ಲಿದೆ. ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ. ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!