Tuesday, March 28, 2023

Latest Posts

ಮಹಾರಾಷ್ಟ್ರದ 2ಕ್ಷೇತ್ರಗಳಿಗೆ ಇಂದು ಉಪಚುನಾವಣೆ: ಮೂವರು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದ ಚಿಂಚ್‌ವಾಡ್,ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯಲಿದ್ದು, ಮೂವರು ಪ್ರಮುಖ ಅಭ್ಯರ್ಥಿಗಳಾದ ವಿಠ್ಠಲ್ ಕಾಟೆ (ಎನ್‌ಸಿಪಿ), ಬಿಜೆಪಿಯ ಅಶ್ವಿನಿ ಜಗತಾಪ್ ಮತ್ತು ಸ್ವತಂತ್ರ ರಾಹುಲ್ ಕಲಾಟೆ ಅವರ ಭವಿಷ್ಯ ನಿರ್ಧಾರವಾಗಲಿದೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಪಕ್ಷದ ನಾಯಕ ಅಜಿತ್ ಪವಾರ್ ಶಿವಸೇನಾ ಯುಬಿಟಿಯ ಆದಿತ್ಯ ಠಾಕ್ರೆ ಮತ್ತು ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ನಾನಾ ಪಟೋಲೆ ಅವರು ವಿವಿಧ ರೋಡ್ ಶೋಗಳು, ಕಾರ್ನರ್ ಮೀಟಿಂಗ್‌ಗಳು ಮತ್ತು ಸಾರ್ವಜನಿಕರ ಮೂಲಕ ಬಿರುಸಿನ ಪ್ರಚಾರ ನಡೆಸಿದರು.

ಜಿಲ್ಲಾ ಮಾಹಿತಿ ಕಛೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಸ್ಬಾ ಪೇಠ ಕ್ಷೇತ್ರದಲ್ಲಿ ಒಟ್ಟು 2,75,428 ಮತದಾರರಿದ್ದು, 1,38, 550 ಮಹಿಳಾ ಮತದಾರರು ಹಾಗೂ 1,36,87 ಪುರುಷ ಮತದಾರರು ಹಾಗೂ ಐವರು ತೃತೀಯಲಿಂಗಿ ಮತದಾರರಿದ್ದಾರೆ.
ಕಸ್ಬಾ ಪೇಠ್ ಉಪಚುನಾವಣೆ ಒಟ್ಟು 270 ಮತಗಟ್ಟೆಗಳಲ್ಲಿ ನಡೆಯಲಿದ್ದು, ಪೊಲೀಸರು ಒಂಬತ್ತು ಸೂಕ್ಷ್ಮ ಮತಗಟ್ಟೆಗಳನ್ನು ಮಾಡಿದ್ದಾರೆ.

ಪುಣೆ ಪೊಲೀಸರಿಂದ ಮತದಾನದ ದಿನದಂದು ಪೊಲೀಸ್ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳ ಜೊತೆಗೆ ಸುಮಾರು 1300 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚಿಂಚವಾಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 56,8954 ಅರ್ಹ ಮತದಾರರು 510 ಪೂಲಿಂಗ್ ಬೂತ್‌ಗಳಲ್ಲಿ ಮತದಾನ ಮಾಡಲಿದ್ದಾರೆ. ಈ ಕ್ಷೇತ್ರದಲ್ಲಿ 13 ಸೂಕ್ಷ್ಮ ಮತಗಟ್ಟೆಗಳನ್ನು ಪೊಲೀಸರು ಗುರುತಿಸಿದ್ದು, 850 ಪೊಲೀಸ್ ಸಿಬ್ಬಂದಿ ಹಾಗೂ ಕ್ಷೇತ್ರದಾದ್ಯಂತ ಎಲ್ಲಾ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಉಪಚುನಾವಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.
ಚಿಂಚವಾಡ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಶಾಸಕ ಲಕ್ಷ್ಮಣ್ ಜಗತಾಪ್ ಮತ್ತು ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದಿಂದ ಮುಕ್ತಾ ತಿಲಕ್ ಅವರ ನಿಧನದ ನಂತರ ಎರಡೂ ಸ್ಥಾನಗಳಿಗೆ ಚುನಾವಣೆ ಅನಿವಾರ್ಯವಾಗಿತ್ತು.

ಮಾರ್ಚ್ 2 ರಂದು ಉಪ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!