ಟರ್ಕಿಯ ಸಿವ್ರಿಸ್‌ನಲ್ಲಿ ಭೂಕಂಪ: 4.4 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟರ್ಕಿಯ ಸಿವ್ರಿಸ್‌ನ ಪಶ್ಚಿಮ ನೈಋತ್ಯಕ್ಕೆ 11 ಕಿಮೀ ದೂರದಲ್ಲಿ ಗುರುವಾರದಂದು 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ.

ಸಿವ್ರಿಸ್ ಟರ್ಕಿಯ ಎಲಾಜಿಗ್ ಪ್ರಾಂತ್ಯದ ಒಂದು ಪಟ್ಟಣವಾಗಿದೆ.

ಭೂಕಂಪವು 04:14:09 (UTC+05:30) ಸಮಯಕ್ಕೆ ಸಂಭವಿಸಿದೆ ಮತ್ತು 11.2 ಕಿಮೀ ಆಳದಲ್ಲಿ ಅಪ್ಪಳಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಮಾಹಿತಿ ನೀಡಿದೆ.

ಈವರೆಗೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!