ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ಲಾಮಿಕ್ ಸ್ಟೇಟ್ ಸಮೂಹದ ಉಗ್ರರು ಸಿರಿಯಾದ ಜೈಲೊಂದರ ಒಳಗೆ ನುಗ್ಗಿ, ಅಲ್ಲಿದ್ದ ಜಿಹಾದಿಗಳನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.
ಖುರ್ದಿಶ್ ಆಡಳಿತದ ಜೈಲಿಗೆ ಉಗ್ರರು ನುಗ್ಗಿದ್ದು, ತಮ್ಮ ಸಹಚರರನ್ನು ಬಿಡುಗಡೆ ಮಾಡುಕೊಂಡು ಪರಾರಿಯಾಗಿದ್ದಾರೆ.
ಎಷ್ಟು ಉಗ್ರರು ಪರಾರಿಯಾಗಿದ್ದಾರೆ ಎನ್ನುವ ಬಗ್ಗೆ ಇದೀಗಲೇ ಮಾಹಿತಿ ಲಭ್ಯವಾಗಿಲ್ಲ.
ಮೊದಲು ಜೈಲಿನ ಮುಂಭಾಗ ಕಾರ್ ಬಾಂಬ್ ಸ್ಫೋಟಿಸಲಾಗಿದೆ. ಬಳಿಕ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದು, ಜೈಲಿನ ಗೋಡೆಯ ಬಳಿ ಉಗ್ರರು ಸ್ಫೋಟಿಸಿದ್ದಾರೆ. ನಂತರ ತಮ್ಮವರನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.