Sunday, September 25, 2022

Latest Posts

ಸೆ. 24ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 94 ನೇ ಸಂಸ್ಥಾಪಕರ ದಿನಾಚರಣೆ, ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ಹೊಸದಿಗಂತ ವರದಿ ಹುಬ್ಬಳ್ಳಿ:
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 94 ನೇ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.24 ರಂದು ಸಂಜೆ 5.30ಕ್ಕೆ ಗೋಕುಲ ರಸ್ತೆಯ ಡೆನ್ನಿಸೆನ್ಸ್ ಹೋಟೆಲ್ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿಯಲ್ಲಿ ಮಾತನಾಡಿದ ಅವರು, ಉದ್ಯಮದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು‌. 26 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, ಆರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದರು.

ಸುರೇಶ ಪಾಟೀಲ, ರಾಮಚಂದ್ರ ಕಾಮತ್, ಸಂಜಯ ಮಿಶ್ರಾ, ಶೈಲಾ ಗಣಾಚಾರಿ, ನಾರಾಯಣ ನಿರಂಜನ, ಶ್ರೀನಿವಾಸರಾವ್ ನೆಕ್ಕಂಟಿ, ಅಮಿತ್ ಪರಮಾರ ಪ್ರಶಸ್ತಿ ಪುರಸ್ಕೃತರು ಎಂದು ತಿಳಿಸಿದರು.

ಕೈಗಾರಿಕ ಸಚಿವ ಮುರುಗೇಶ ನಿರಾಣಿ, ಮುದೋಳ ಎಂ.ಆರ್ ಎನ್ ಗ್ರೂಪ್ ವ್ಯವಸ್ಥಾಪಕ ವಿಜಯ ನಿರಾಣಿ, ವೀಣಾ ಮೊಕ್ತಾಲಿ ಅವರು ಮುಖ್ಯ ಭಾಷಣಕಾರಿಯಾಗಿ ಭಾಗವಹಿಸುವರು. ಅಧ್ಯಕ್ಷತೆ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ವಹಿಸುವರರು ಎಂದು ತಿಳಿಸಿದರು.

ಸಂಸ್ಥಾಪಕ ದಿನಾಚರಣೆಯ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಎಸ್.ಪಿ ಸಂಶಿಮಠ, ಬಿ.ಎಸ್. ಸತೀಶ, ಪ್ರವೀಣ ಅಂಗಡಿ, ಶಂಕರ ಕೋಳಿವಾಡ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!