Sunday, December 10, 2023

Latest Posts

ಜೊಮ್ಯಾಟೊ: ಮಹಿಳಾ ಡೆಲಿವರಿ ಪಾಲುದಾರರಿಗೆ ಸಿಗಲಿದೆ ಮಾತೃತ್ವ ವಿಮಾ ಯೋಜನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಅತಿದೊಡ್ಡ ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮ್ಯಾಟೊ ತನ್ನ ಮಹಿಳಾ ವಿತರಣಾ ಪಾಲುದಾರರಿಗಾಗಿ ʻಮಾತೃತ್ವ ವಿಮಾ ಯೋಜನೆʼ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ವಿಮಾ ಯೋಜನೆಯ ಮೂಲಕ ಗರ್ಭಧಾರಣೆ, ಹೆರಿಗೆ ಮತ್ತು ಸಂಬಂಧಿತ ವೆಚ್ಚಗಳನ್ನು ಕಂಪನಿ ಭರಿಸಲಿದೆ ಎಂದು ತಿಳಿಸಿದೆ.

ಈ ಸೌಲಭ್ಯ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆಸಂಪೂರ್ಣ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಜೊಮ್ಯಾಟೊ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ರಂಜನ್ ಮಾತನಾಡಿ, ಇಂತಹ ಯೋಜನೆಯನ್ನು ಪರಿಚಯಿಸುವ ಮೂಲಕ ನಾವು ಗರ್ಭಾವಸ್ಥೆಯಲ್ಲಿ ಮಹಿಳಾ ವಿತರಣಾದಾರರ ಕಷ್ಟಕ್ಕೆ ಕಂಪನಿ ನೆರವಾಗಲಿದೆ ಎಂದರು.

ಜೊಮ್ಯಾಟೊ ಹೆರಿಗೆ ವಿಮಾ ಯೋಜನೆಯ ಮೂಲಕ ಮಹಿಳಾ ವಿತರಣಾ ಪಾಲುದಾರರಿಗೆ ಪ್ರಯೋಜನಗಳನ್ನು ನೀಡಲು ACKO ನೊಂದಿಗೆ ಪಾಲುದಾರಿಕೆ ಹೊಂದಿದೆ. 60 ದಿನಗಳಿಗಿಂತ ಹೆಚ್ಚು ಕಾಲ ಪ್ಲಾಟ್‌ಫಾರ್ಮ್‌ಗೆ ಸಂಪರ್ಕ ಹೊಂದಿದ ಮತ್ತು 1000 ಕ್ಕೂ ಹೆಚ್ಚು ಡೆಲಿವರಿಗಳನ್ನು ಪೂರ್ಣಗೊಳಿಸಿದ ಮಹಿಳಾ ವಿತರಣಾ ಪಾಲುದಾರರಿಗೆ ಈ ವಿಮಾ ಪ್ರಯೋಜನವು ಲಭ್ಯವಿದೆ. ಈ ವಿಮಾ ಯೋಜನೆಯ ಮೂಲಕ, ಎರಡು ಮಕ್ಕಳ ಸಾಮಾನ್ಯ ಅಥವಾ ಸಿಸೇರಿಯನ್ ಹೆರಿಗೆಯ ವೆಚ್ಚವನ್ನು ಕಂಪನಿಯು ಭರಿಸಲಿದೆ.

ಜೊತೆಗೆ ಗರ್ಭಪಾತದಂತಹ ಸಂಬಂಧಿಸಿದ ತೊಡಕುಗಳನ್ನು ಸಹ ಇದಕ್ಕೆ ಸೇರಿಸಲಾಗಿದೆ. ಈ ವಿಮೆಯ ಮೂಲಕ, ಕಂಪನಿಯು ಸಾಮಾನ್ಯ ಹೆರಿಗೆಗೆ ರೂ.25,000 ಮತ್ತು ಸಿಸೇರಿಯನ್ ಹೆರಿಗೆಗೆ ರೂ.45,000 ವರೆಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಗರ್ಭಪಾತದ ಸಂದರ್ಭದಲ್ಲಿ ಮಹಿಳೆಯರಿಗೆ ರೂ. 40,000 ವಿಮಾ ರಕ್ಷಣೆ ಸಿಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!