ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ-ಯಾದಗಿರಿ ಬ್ಯಾಂಕ್,ನ ಅಧಿಕಾರವನ್ನು ವಹಿಸಿಕೊಂಡು ಜ.8ಕ್ಕೆ ಒಂದು ವರ್ಷ ಆಗುತ್ತಿದ್ದು, ವರ್ಷದಲ್ಲಿ 1.26ಲಕ್ಷ ರೈತರಿಗೆ 500 ಕೋಟಿ ರೂ. ಸಾಲ ವಿತರಿಸಲಾಗಿದ್ದು, ಮಾರ್ಚ್ ಒಳಗೆ ಇನ್ನೂ 500 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಜ.8ಕ್ಕೆ ಜಾರಿಗೆ ಬಂದು ಒಂದು ವರ್ಷ ಆಗಿದೆ. ಡಿಸಿಸಿ ಬ್ಯಾಂಕ್ ಹಲವು ವರ್ಷಗಳಿಂದ ಸಾಲ ವಿತರಣೆ ಮಾಡುವುದನ್ನೇ ಬಂದ್ ಮಾಡಿತ್ತು. ಆದರೆ, ನಾನು ಅಧ್ಯಕ್ಷನಾದ ಮೇಲೆ ಬ್ಯಾಂಕ್ ಪುನರುಜ್ಜೀವನಗೊಳಿಸಿ ಒಂದು ವರ್ಷದಲ್ಲಿ 1.26 ಲಕ್ಷ ರೈತರಗೆ 500 ಕೋಟಿ ರೂ. ಬೆಳೆ ಸಾಲ ಕೊಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಜೊತೆಗೆ ರೈತರಿಂದ 100 ಕೋಟಿ ರೂ. ಠೇವಣಿ ಸಂಗ್ರಹ ಮಾಡಿದ್ದೇವೆ . ಬ್ಯಾಂಕ್‍ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ತಮ್ಮ ಬ್ಯಾಂಕ್‍ನಲ್ಲಿ ಹೆಚ್ಚಿನ ಬಡ್ಡಿ ನೀಡುತ್ತಿz್ದÉೀವೆ. ಬಡ್ಡಿದರ 7ರೂ. ಕೊಡುತ್ತಿದ್ದು, ಮಹಿಳೆಯರಿಗೆ, ವೃದ್ಧರಿಗೆ, ವಿಧೆವೆಯರಿಗೆ 7.50 ರೂ. ಬಡ್ಡಿ ದರ ವಿತರಿಸುತ್ತಿರುವುದರಿಂದ ಜನರು ಬ್ಯಾಂಕ್‍ನ ಮೇಲೆ ಹೆಚ್ಚು ವಿಶ್ವಾಸವಿಟ್ಟು ಠೇವಣಿ ಇಡುತ್ತಿದ್ದಾರೆ ಎಂದು ತಿಳಿಸಿದರು.
ಐದು- ಆರು ವರ್ಷಗಳಿಂದ ಬ್ಯಾಂಕ್‍ಗೆ ಕಟ್ಟಬೇಕಾಗಿದ್ದ ಸಾಲವನ್ನು ರೈತರಿಂದ 200 ಕೋಟಿ ರೂ. ಸಂಗ್ರಹ ಮಾಡಿದ್ದೇವೆ . ಸರಕಾರದಿಂದ ಬರುವ ಬಡ್ಡಿ ಹಣ ಹಾಗೂ ಸಾಲಮನ್ನಾ ಹಣ ಒಟ್ಟು 40ರಿಂದ 50 ಕೋಟಿ ರೂ. ಸಂಸ್ಥೆಗೆ ಬಂದಿದೆ ಎಂದು ತಿಳಿಸಿದರು.
1000 ಕೋಟಿ ರೂ.ಗುರಿ
ನಿಷ್ಕ್ರಿಯವಾಗಿದ್ದ ವ್ಯವಸಾಯ 322 ಸಂಘಗಳನ್ನು ಪುನರುಜ್ಜೀವನಗೊಳಿಸಿದ್ದು, ಮಾರ್ಚ್ ಅಂತ್ಯದವರಗೆ ಮತ್ತೆ 500 ಕೋಟಿ ರೂ.ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಸಾಲ ಮನ್ನಾ ಆದವರು, ಸಾಲ ತೀರಿಸಿದವರಿಗೆ ಸಾಲ ನೀಡಿದ್ದಿಲ್ಲ. ಈಗ ಇವರಿಗೂ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಒಟ್ಟಾರೆಯಾಗಿ ಈ ವರ್ಷದ ಮಾರ್ಚ್ ಅಂತ್ಯದವರೆಗೆ 1000 ಕೋಟಿ ರೂ. ವ್ಯವಹಾರ ಮಾಡುವ ಗುರಿ ಹೊಂದಲಾಗಿದ್ದು, ಮುಂದಿನ ವರ್ಷ 2500 ಕೋಟಿ ರೂ. ಗುರಿ ಹೊಂದಲು ನಿ`ರ್Àರಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಕಚೇರಿ, ಎಟಿಎಂ ವಾಹನಗಳಿಗೆ ಸಿಎಂ ಚಾಲನೆ 4ಕ್ಕೆ: ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿ, ಚಿತ್ತಾಪುರ ಶಾಖೆಯ ನೂತನ ಕಟ್ಟಡ ಶಿಲಾನ್ಯಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಜ.4ಕ್ಕೆ ಚಾಲನೆ ನೀಡಲಿದ್ದಾರೆ ಎಂದು ತೆಲ್ಕುರ್ ತಿಳಿಸಿದರು.
ಈಗಿರುವ ಬ್ಯಾಂಕ್ ಸ್ಥಳದಲ್ಲಿಯೇ ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ 5 ಫ್ಲೋರ್ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇವೆ. ಕಟ್ಟಡದ ವಾಸ್ತು ತಜ್ಞರು ಜಿ.ಎಸ್.ಖಂಡೇರಾವ್ ಆಗಿದ್ದಾರೆ. 1200 ಜನರು ಕೂಡುವಸಭಾಂಗಣ, ಅತಿಥಿ ಗೃಹ, 200 ಜನರಿಗೆ ಟ್ರೇನಿಂಗ್ ಸೆಂಟರ್, ಸಹಕಾರಿ ಶಿಕ್ಷಣಕ್ಕೆ ತರಬೇತಿ ನೀಡುವ ಹೀಗೆ ಅನೇಕ ಕೋಣೆಗಳನ್ನು ಕಟ್ಟಡ ಹೊಂದಲಿದೆ ಎಂದು ತಿಳಿಸಿದರು.
ಈ ಕಟ್ಟಡಕ್ಕೆ ಈಗಾಗಲೇ ತಮ್ಮ ಬ್ಯಾಂಕ್‍ನಲ್ಲಿ 10 ಕೋಟಿ ರೂ.ಯಿದ್ದು, ಮುಖ್ಯಮಂತ್ರಿ ಅವರು 10 ಕೋಟಿ ರೂ. ನೀಡುವ ವಾಗ್ದಾನ ಮಾಡಿದ್ದಾರೆ. ಇದರ ಜತೆಗೆ ಪ್ರತಿಯೊಬ್ಬ ರೈತರಿಂದ 500 ಕಾಣಕೆಯನ್ನಾಗಿ ಸಂಗ್ರಹಿಸಿದ್ದೇವೆ. ಹೊಸ 10 ಬ್ರ್ಯಾಂಚ್‍ಗಳ ಕಟ್ಟಡವನ್ನೂ ಸ್ಥಾಪಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು. 322 ವ್ಯವಸಾಯ ಸಂಘಗಳಿಗೆ ಮಿನಿ ಎಟಿಎಂಗಳು ನೀಡುವುದಕ್ಕೆಘಿ, 2 ಮೈಕ್ರೋ ಮಿನಿ ವಾಹನಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಬ್ಯಾಂಕ್ ನಿರ್ದೇಶಕರಾದ ಶರಣಬಸಪ್ಪ ಅಷ್ಟಗಿ, ಶಿವಾನಂದ ಮಾನಕರ್, ಗೌತಮ ಪಾಟೀಲ್, ಬಸವರಾಜ ಪಾಟೀಲ್, ಕಲ್ಯಾಣಪ್ಪ ಪಾಟೀಲ್, ಚಂದ್ರಶೇಖರ ತಳ್ಳಳ್ಳಿ ಇತರರಿದ್ದರು.