Sunday, September 25, 2022

Latest Posts

ಬಾಗಲಕೋಟೆಯಲ್ಲಿ 500 ಮೀ.ಉದ್ದದ ತಿರಂಗಾಯಾತ್ರೆ: ಸಾವಿರಾರು ವಿದ್ಯಾರ್ಥಿಗಳು ಭಾಗಿ

ಹೊಸದಿಗಂತ ವರದಿ ಬಾಗಲಕೋಟೆ:
ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನಲೆಯಲ್ಲಿ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ 500 ಮೀ. ಉದ್ದದ ತಿರಂಗಾ ಯಾತ್ರೆ ಶನಿವಾರ ಬೆಳಗ್ಗೆ ಅದ್ದೂರಿಯಾಗಿ ನಡೆಯಿತು. ಬಸವೇಶ್ವರ ಎಂಜನೀಯರಿಂಗ್ ಕಾಲೇಜ್ ಸರ್ಕಲ್ ಬಳಿಯಲ್ಲಿ ತಿರಂಗಾ ಯಾತ್ರೆಗೆ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಚಾಲನೆ ನೀಡಿದರು.

ವಿದ್ಯಾಗಿರಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ತಿರಂಗಾ ಯಾತ್ರೆಯುದ್ದಕ್ಕೂ ಶಾಸಕರು ಭಾಗವಹಿಸಿದ್ದರು. ಸಾವಿರಾರು ವಿದ್ಯಾರ್ಥಿಗಳು 500 ಮೀ ಉದ್ದದ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು , ಹೈಸ್ಕೂಲ್, ಪ್ರಾಥಮಿಕ ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು. ತಿರಂಗಾ ಯಾತ್ರೆಯಲ್ಲಿ ಮಹಾತ್ಮಾ ಗಾಂಧಿಜಿ, ಭಾರತ ಮಾತೆ ,ಸುಭಾಸ ಚಂದ್ರಭೋಸ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ವೇಷ ಹಾಕಿಕೊಂಡ‌ ವಿದ್ಯಾರ್ಥಿಗಳು ಗಮನಸೆಳೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!